ರಹಮದ್ ತರೀಕೆರೆ ನನಗೆ ಈ ಊರಿನ ಹಸಿರು ಗಾಳಿ ಧೂಳೂ ಮನುಷ್ಯರ ಜತೆ ನಂಟಿದೆ. ಅದಕ್ಕೆ ಗಾಯವಾದಾಗೆಲ್ಲ ನನಗೆ ನೋವಾಗುತ್ತದೆ! ತರೀಕೆರೆಯು ಚಿಕ್ಕಮಗಳೂರು ಜಿಲ್ಲೆಗೆ ಸೇರಿದರೂ, ಆಸ್ಪತ್ರೆ ಖರೀದಾರಿ ಶಿಕ್ಷಣ-ನಮ್ಮ ಎದ್ದುಬಿದ್ದು ವ್ಯವಹಾರವೆಲ್ಲ ಪಕ್ಕದ ಶಿವಮೊಗ್ಗೆಯಲ್ಲೆ. ಸೋವಿಯಾದ ರೈಲಿನಲ್ಲಿ ಜನ ಹೋಗಿಬರುವರು. …










