ನಾ.ದಿವಾಕರ ಸಮಾಜದ ಗರ್ಭದಲ್ಲೇ ಮೊಳೆಯುವ ಕ್ರೌರ್ಯ ಸಾಪೇಕ್ಷವಾದಾಗ ಹಿಂಸೆ ಸ್ವಿಕೃತವಾಗುತ್ತದೆ ಕಳೆದ ಮೂರುನಾಲ್ಕು ದಶಕಗಳಲ್ಲಿ ಭಾರತ ಕಂಡಿರುವಷ್ಟು ಕ್ರೌರ್ಯ ಮತ್ತು ಹಿಂಸೆ ಪ್ರಾಚೀನ ಸಮಾಜವನ್ನೂ ನಾಚಿಸುತ್ತದೆ. ಮನುಷ್ಯರಲ್ಲಿ ಇತರ ಅವಗುಣಗಳಂತೆಯೇ ಆಂತರ್ಯದಲ್ಲೇ ಸೃಷ್ಟಿಯಾಗುವ ಕ್ರೌರ್ಯ ಮತ್ತು ಹಿಂಸೆ ವ್ಯಕ್ತಿಗತ ನೆಲೆಯಲ್ಲಿ ಪಡೆದುಕೊಳ್ಳುವ …