Mysore
21
overcast clouds

Social Media

ಸೋಮವಾರ, 20 ಜುಲೈ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಂಪುಟ ವಿಸ್ತರಣೆ ನಿರೀಕ್ಷೆ: ಸಂಕಟ ಪರೀಕ್ಷೆ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಈವಾರ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಅಂದ ಹಾಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಈಗಾಗಲೇ ತಡವಾಗಿದ್ದರೂ ಅದಕ್ಕೆ ಕಾರಣಗಳೂ ಇವೆ. ಮೊದಲನೆಯದಾಗಿ,ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕಿರುವ ಶಾಸಕರ ಬಲ. ಮುಖ್ಯಮಂತ್ರಿಗಳೂ ಸೇರಿದಂತೆ ಸಂಪುಟಕ್ಕೆ ಸೇರಲು ಸಾಧ್ಯವಿರು ವವರ ಸಂಖ್ಯೆ ಮೂವತ್ನಾಲ್ಕು ಮಾತ್ರ.ಅರ್ಥಾತ್,ಇನ್ನೂ ನೂರಕ್ಕೂ ಹೆಚ್ಚು ಶಾಸಕರು ಮಂತ್ರಿಗಿರಿಯ ಭಾಗ್ಯದಿಂದ ವಂಚಿತರಾಗಬೇಕಾಗುತ್ತದೆ.

ಅಂದ ಹಾಗೆ ಹೀಗೆ ಮಂತ್ರಿ ಮಂಡಲಕ್ಕೆ ಸೇರಲಾಗದೆ ಉಳಿಯುವವರ ಪೈಕಿ ಕನಿಷ್ಠ ಐವತ್ತು ಮಂದಿ ಹಿರಿತನ,ಅನುಭವ ಮತ್ತು ದಕ್ಷತೆಯನ್ನು ಹೊಂದಿರುವವರೇ.ಆದರೆ ಸಂಪುಟಕ್ಕೆ ವಿಧಾನಸಭೆಯ ಒಟ್ಟು ಶಾಸಕ ಬಲದ ಹದಿನೈದು ಪರ್ಸೆಂಟು ಮಂದಿ ಮಾತ್ರ ಮಂತ್ರಿಗಳಾಗಲು ಸಾಧ್ಯ. ಆದ್ದರಿಂದ ಸಚಿವ ಸಂಪುಟ ವಿಸ್ತರಣೆಯ ನಂತರ ಒಂದಷ್ಟು ಅಸಮಾಧಾನ ಭುಗಿಲೇಳುವುದು ಸಹಜ ಮತ್ತು ಅಸಮಾಧಾನಿತರನ್ನು ಸಮಾಧಾನಿಸಲು ಕಾಂಗ್ರೆಸ್ ವರಿಷ್ಠರು ಒಂದಷ್ಟು ಸರ್ಕಸ್ ನಡೆಸುವುದೂ ಅಷ್ಟೇ ಸಹಜ. ಗಮನಿಸಬೇಕಾದ ಸಂಗತಿ ಎಂದರೆ ಈ ಬಾರಿಯ ಸಂಪುಟ ವಿಸ್ತರಣೆ ಕಾಂಗ್ರೆಸ್ ವರಿಷ್ಠರನ್ನು ಎರಡು ವಿಧವಾಗಿ ಕಾಡಲಿದೆ.

ಮೊದಲನೆಯದಾಗಿ, ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾದ ಸಂದರ್ಭದದರೂ ತಮಗೆ ಮಂತ್ರಿಗಿರಿ ಸಿಗಬೇಕಿತ್ತು. ಆದರೆ ಸಿಗಲಿಲ್ಲ ಎಂದು ಕುಪಿತರಾಗುವವರು. ಇನ್ನು ಎರಡನೆಯ ದಾಗಿ,ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ತಮಗೆ ಪುನಃ ಅವಕಾಶ ಸಿಗಬೇಕಿತ್ತು ಎಂದು ಭಾವಿಸುವವರು. ಹೀಗಾಗಿ ಇಂತಹ ಎರಡು ವರಡು ವರ್ಗಗಳ ಅಸಮಾಧಾನಿತರನ್ನು ಕಾಂಗ್ರೆಸ್ ವರಿಷ್ಠರು ಸಮಾಧಾನಿಸಬೇಕು.ಅಂದ ಹಾಗೆ ರಾಹುಲ್ ಗಾಂಧಿಯವರ ಈಗಿನ ಮನಃಸ್ಥಿತಿ ಹೇಗಿದೆ ಎಂದರೆ ಅವರು ಅಸಮಾಧಾನಿತರನ್ನು ಸಂತೈಸುವ ಗೋಜಿಗೆ ಹೋಗುವುದಿಲ್ಲ ಎನ್ನುವವರು ಇzರೆ. ಹೀಗೆ ಹೇಳುವವರು ಇದಕ್ಕೊಂದು ಉದಾ ಹರಣೆಯನ್ನೂ ಕೊಡುತ್ತಾರೆ. ಅದರ ಪ್ರಕಾರ, ಡಿ.ಕೆ.ಶಿವಕುಮಾರ್ ಅವರ ಜತೆ ಹದಿಮೂರು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರಲ್ಲ ಈ ಪೈಕಿ ಒಬ್ಬರು ಹಿರಿಯ ಸಚಿವರು ರಾಹುಲ್ ಗಾಂಧಿಯವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದರು. ಹೀಗೆ ಭೇಟಿ ಮಾಡಿದ ಸಂದರ್ಭದಲ್ಲಿ ಈ ಸಚಿವರು ನೇರವಾಗಿ ತಮ್ಮ ಅಸಮಾಧಾನ ತೋಡಿಕೊಂಡಿzರೆ.‘ನಾನು ಹಲವು ಬಾರಿ ಸಂಸದನಾದವನು.

ಶಾಸಕನಾದವನು. ಮಂತ್ರಿಗಿರಿಯ ವಿವಿಧ ಮಜಲುಗಳನ್ನು ನೋಡಿದವನು. ಆದರೆ ನನ್ನಂತಹವನಿಗೆ ನಗಣ್ಯ ಎನ್ನಿಸುವ ಖಾತೆ ನೀಡಲಾಗಿದೆ. ಇದನ್ನು ನೀವು ಸರಿಪಡಿಸಬೇಕು’ ಎಂದು ಆಗ್ರಹಪಡಿಸಿದ್ದಾರೆ. ಅದರೆ ಅವರು ಯಾವಾಗ ಈ ಮಾತು ಹೇಳಿದರೋ ಆಗ ಅಪಾದ ಮಸ್ತಕ ಈ ಸಚಿವರನ್ನು ನೋಡಿದ ರಾಹುಲ್ ಗಾಂಧಿಯವರು:‘ನನಗೆ ಗೊತ್ತು. ನೀವು ತುಂಬ ಸೀನಿಯರ್. ಹೀಗಾಗಿ ನಿಮಗೆ ಕೊಟ್ಟಿರುವ ಖಾತೆಯ ಬಗ್ಗೆ ಅಸಮಾಧಾನವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ. ಮುಂದಿನ ಸಲ ನೀವು ಅಮೆರಿಕದ ಅಧ್ಯಕ್ಷ ಡೋನಾಲ್ಡ ಟ್ರಂಪ್ ಅವರ ವಿರುದ್ಧ ಸ್ಪರ್ಧಿಸಿ. ನಿಮಗೆ ಫುಲ್ಲು ಸಪೋರ್ಟ್ ಮಾಡುತ್ತೇವೆ’ಎಂದಿದ್ದಾರೆ. ಇದಾದ ನಂತರ ಆ ಸಚಿವರು ತಮಗೆ ಸಿಕ್ಕ ಖಾತೆಯ ಬಗ್ಗೆ ಚಕಾರವೆತ್ತಿಲ್ಲ. ಹೀಗೆ ಇಂತಹದೊಂದು ಬೆಳವಣಿಗೆಯ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಕೆಲ ನಾಯಕರು ಇನ್ನು ಅಸಮಾಧಾನಿತರ ವಿಷಯದಲ್ಲಿ ರಾಹುಲ್ ಗಾಂಧಿ ಕೇರ್ ಮಾಡುವುದಿಲ್ಲ ಎನ್ನುತ್ತಾರೆ.

ಆದರೆ ಸಮಸ್ಯೆ ಅಷ್ಟು ಸರಳವಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಕಾರಣಮಂತ್ರಿ ಪದವಿ ಸಿಗದವರ ಅತೃಪ್ತಿಯನ್ನು ನಿವಾರಿಸುವುದು ಒಂದು ಭಾಗವಾದರೆ, ಎರಡನೇ ಕಂತಿನ ಸಂಪುಟ ವಿಸ್ತರಣೆಯ ನಂತರ ರಾಜ್ಯದ ಜನಸಾಮಾನ್ಯರಲ್ಲಿ ಸೃಷ್ಟಿಯಾಗುವ ಬೇಗುದಿಯನ್ನು ಸರಿಪಡಿಸುವುದು ಇನ್ನೂ ಮಹತ್ವದ ಭಾಗ. ಯಾಕೆಂದರೆ ಒಟ್ಟಾರೆ ಮಂತ್ರಿಮಂಡಲ ಕಣ್ಣ ಮುಂದೆ ಬಂದಾಗ ಅದರಲ್ಲಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯಬಲ್ಲವರು ಯಾರು? ಎಂದು ಜನಸಾಮಾನ್ಯರು ಗಮನಿಸುತ್ತಿರುತ್ತಾರೆ.

ಅಂದ ಹಾಗೆ ಸಾಮಾಜಿಕ ನ್ಯಾಯದ ಬಗ್ಗೆ ತಮಗೆ ನಂಬಿಕೆ ಇದೆ ಎನ್ನುವ ಹಲವರು ಇರಬಹುದು.ಅದರೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಹಿನ್ನೆಲೆ ಇರದಿದ್ದರೆ ಅಂತಹವರನ್ನು ಸಾಮಾಜಿಕ ನ್ಯಾಯದ ರಥ ಎಳೆಯಬಲ್ಲವರು ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಒಂದೆಡೆ ಹತ್ತಾರು ವ್ಯವಹಾರಗಳನ್ನು ಮಾಡುತ್ತಾ,ಮತ್ತೊಂದೆಡೆ ಸಮಾಜದ ತಳ ವರ್ಗಗಳ ಬಗ್ಗೆ,ಶೋಷಿತರ ಬಗ್ಗೆ ಕಣ್ಣೀರು ಸುರಿಸುವವರನ್ನೂ ಸಾಮಾಜಿಕ ನ್ಯಾಯದ ರಥ ಎಳೆಯಬಲ್ಲವರು ಎಂದು ಹೇಳಲು ಸಾಧ್ಯವಿಲ್ಲ.

ಇವತ್ತು ವಿವಿಧ ಜತಿ,ಸಮುದಾಯಗಳಿಗೆ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ನೀಡುವುದು ಬೇರೆ. ಆದರೆ ಒಟ್ಟಾರೆ ಸಮಾಜದಲ್ಲಿರುವ ಶೋಷಿತರ ಪ್ರತಿನಿಧಿಯಾಗಬಲ್ಲವರು ಬೇರೆ. ಹೀಗಾಗಿ ಎರಡನೇ ಕಂತಿನಲ್ಲಿ ಇಂತಹ ನಾಯಕರಿಗೆ ಅವಕಾಶ ಸಿಗದಿದ್ದರೆ ವ್ಯವಸ್ಥೆಯಲ್ಲಿ ಒಂದು ಆಕ್ರೋಶ ಶುರುವಾಗುತ್ತದೆ. ಹೀಗಾದಾಗ ಅವರ ಆಕ್ರೋಶವನ್ನು ನಿವಾರಿಸುವುದು ಅಸಾಧ್ಯದ ಮಾತು. ಆತಂಕದ ಸಂಗತಿ ಎಂದರೆ ಈಗ ವಿಸ್ತರಣೆಯಾಗುತ್ತಿರುವ ಎರಡನೇ ಕಂತಿನ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತಬಲ್ಲ ಎಷ್ಟು ಮಂದಿ ಇರುತ್ತಾರೆ? ಎಂಬ ಪ್ರಶ್ನೆಗೆ ಕಾಂಗ್ರೆಸ್ ವಲಯಗಳಲ್ಲಿ ಉತ್ತರವಿಲ್ಲ. ಅಂದ ಹಾಗೆ ಸ್ವಾತಂತ್ರ್ಯೋತ್ತರ ಕರ್ನಾಟಕದ ಇತಿಹಾಸದಲ್ಲಿ ಇದುವರೆಗೆ ರಚನೆಯಾದ ಸಚಿವ ಸಂಪುಟಗಳೇನಿವೆ. ಆ ಸಂಪುಟಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಧ್ವನಿ ಎತ್ತುವ ಹಲವು ಮಂದಿ ನಾಯಕರು ಇರುತ್ತಿದ್ದರು.

ಇಪ್ಪತ್ತೊಂದನೇ ಶತಮಾನದ ಆರಂಭದಿಂದ ಇಂತಹ ಸಾಮಾಜಿಕ ನ್ಯಾಯದ ಧ್ವನಿಗಳು ಕಡಿಮೆಯಾದರೂ ಕೆಲವರಾದರೂ ತಮ್ಮ ಅಸ್ತಿತ್ವವನ್ನು ತೋರ್ಪಡಿಸುತ್ತಿದ್ದರು ಮತ್ತು ಸಾಮಾಜಿಕ ನ್ಯಾಯದ ವಿಷಯದಲ್ಲಿ ತಮ್ಮ ಬದ್ಧತೆಯನ್ನು ತೋರಿಸುತ್ತಿದ್ದರು. ಅರ್ಥಾತ್, ವ್ಯವಸ್ಥೆಯಲ್ಲಿ ಅಸಮಾನತೆ ಹೆಚ್ಚಲು ಕಾರಣವಾಗುವ ಯೋಜನೆಗಳು ಸಂಪುಟ ಸಭೆಯಲ್ಲಿ ಮಂಡನೆಯಾದರೆ ಇಂತಹ ನಾಯಕರು ಅದನ್ನು ಗಟ್ಟಿ ಧ್ವನಿಯಲ್ಲಿ ವಿರೋಽಸುತ್ತಿದ್ದರು. ಅದರೆ ಇನ್ನು ಮುಂದೆ ಇಂತಹವರು ಸಂಪುಟದಲ್ಲಿ ಇಲ್ಲವೇ ಇಲ್ಲ ಎಂಬಂತಾಗಿ ಹೋದರೆ ನಾಡಿನ ಗತಿಯೇನು? ಇವತ್ತು ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆ ಹತ್ತಿರವಾಗಿರುವ ಸಂದರ್ಭದಲ್ಲಿ ಇಂತಹದೊಂದು ಅನುಮಾನ ಜನಸಾಮಾನ್ಯರನ್ನು ಕಾಡುತ್ತಿರುವುದು ನಿಜ.

ಹೀಗಾಗಿ ಸಚಿವ ಸಂಪುಟ ವಿಸ್ತರಣೆಯ ನಂತರದ ಬೆಳವಣಿಗೆಗಳನ್ನು ರಾಹುಲ್ ಗಾಂಧಿ ನಿರಾಯಾಸವಾಗಿ ಸಂಭಾಳಿಸುತ್ತಾರೆ ಎಂದು ಮಾತನಾಡುವುದು ಬೇರೆ. ಅದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಎದುರಿಸುವುದು ಬೇರೆ. ಸದನ್ನು ಕಾಂಗ್ರೆಸ್ ಪಕ್ಷ ಹೇಗೆ ಎದುರಿಸುತ್ತದೆ ಎಂಬುದೇ ಸದ್ಯದ ಬಹುದೊಡ್ಡ ನಿರೀ?

” ಸಚಿವ ಸಂಪುಟ ವಿಸ್ತರಣೆಯ ನಂತರ ಒಂದಷ್ಟು ಅಸಮಾಧಾನ ಭುಗಿಲೇಳುವುದು ಸಹಜ ಮತ್ತು ಅಸಮಾಧಾನಿತರನ್ನು ಸಮಾಧಾನಿಸಲು ಕಾಂಗ್ರೆಸ್ ವರಿಷ್ಠರು ಒಂದಷ್ಟು ಸರ್ಕಸ್ ನಡೆಸುವುದೂ ಅಷ್ಟೇ ಸಹಜ.”

 

Tags:
error: Content is protected !!