ವಾಷಿಂಗ್ಟನ್ : ಟಿಬಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ ಅವರಿಗೆ ತನ್ನ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿರುವ ಅಮೆರಿಕ, ಮುಂದಿನ ಉತ್ತರಾಧಿಕಾರಿ ಆಯ್ಕೆಯ ವಿಷಯದಲ್ಲಿ ಯಾರೊಬ್ಬರ ಹಸ್ತಕ್ಷೇಪದ ಅಗ್ಯತ್ಯವಿಲ್ಲ ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ಕೊಟ್ಟಿದೆ.
ತಮ್ಮ ಉತ್ತರಧಿಕಾರಿ ಆಯ್ಕೆಯ ವಿಷಯದಲ್ಲಿ ಚೀನಾದ ಅನುಮತಿ ಕಡ್ಡಯವಾಗಿ ಅಗತ್ಯ ಎಂದು ಚೀನಾ ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಮೇರಿಕಾ, ಟಿಬೆಟಿಯನ್ನರು ತಮ್ಮ ಧಾರ್ಮಿಕ ನಾಯಕರನ್ನು ‘ಹಸ್ತಕ್ಷೇಪವಿಲ್ಲದೆ‘ ಮುಕ್ತವಾಗಿ ಆಯ್ಕೆ ಮಾಡುವ ಸಾಮರ್ಥ್ಯಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.
ಟಿಬೆಟಿಯನ್ನರ ಮೂಲಭೂತ ಸ್ವಾತಂತ್ರ್ಯವನ್ನು ಉತ್ತೇಜಿಸುವ ಅಮೆರಿಕದ ಬದ್ಧತೆಯನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ಅವರ ೯೦ನೇ ಹುಟ್ಟುಹಬ್ಬದಂದು ಯುನೈಟೆಡ್ ಸ್ಟೇಟ್ಸ್ ಅವರಿಗೆ ಶುಭಾಶಯಗಳನ್ನು ಕೋರುತ್ತದೆ. ದಲೈ ಲಾಮಾ ಅವರು ಏಕತೆ, ಶಾಂತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ಜನರನ್ನು ಪ್ರೇರೇಪಿಸುವುದನ್ನು ಮುಂದುವರಿಸಿದ್ದಾರೆ‘ ಎಂದು ವಿದೇಶಾಂಗ ಇಲಾಖೆ ಹಂಚಿಕೊಂಡ ಹೇಳಿಕೆಯಲ್ಲಿ ರೂಬಿಯೊ ಹೇಳಿದ್ದಾರೆ.
ಚೀನಾವನ್ನು ಹೆಸರಿಸದೆ, ರೂಬಿಯೊ ಟಿಬೆಟಿಯನ್ನರ ಸಾಂಸ್ಕ ತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಮೆರಿಕದ ಬೆಂಬಲದ ಬಗ್ಗೆ ದೇಶಕ್ಕೆ ಪರೋಕ್ಷ ಸಂದೇಶವನ್ನು ರವಾನಿಸಿದರು, ‘ಯುನೈಟೆಡ್ ಸ್ಟೇಟ್ಸ್ ಟಿಬೆಟಿಯನ್ನರ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಗೌರವವನ್ನು ಉತ್ತೇಜಿಸಲು ದೃಢವಾಗಿ ಬದ್ಧವಾಗಿದೆ. ಟಿಬೆಟಿಯನ್ನರ ವಿಶಿಷ್ಟ ಭಾಷಾ, ಸಾಂಸ್ಕತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ, ಇದರಲ್ಲಿ ಧಾರ್ಮಿಕ ನಾಯಕರನ್ನು ಹಸ್ತಕ್ಷೇಪವಿಲ್ಲದೆ ಮುಕ್ತವಾಗಿ ಆಯ್ಕೆ ಮಾಡುವ ಮತ್ತು ಪೂಜಿಸುವ ಅವರ ಸಾಮಥ್ರ್ಯವೂ ಸೇರಿದೆ ಎಂದಿದ್ದಾರೆ.