ನಂಜನಗೂಡಿನಲ್ಲಿ ಸುಪ್ರಸಿ ದ್ಧ ಶ್ರೀಕಂಠೇಶ್ವರ ದೇವಾಲಯ ಇದೆ. ಇದಕ್ಕೆ ಪೂರಕವಾಗಿ ಈ ತಾಲ್ಲೂಕಿನ ಗ್ರಾಮವೊಂದರ ಸಮೀಪದ ಜಮೀನಿನಲ್ಲಿ ಮಣ್ಣು ವಿಭೂತಿ ತಯಾರಿಕೆಗೆ ಪೂರಕ ಗುಣಗಳನ್ನು ಹೊಂದಿ ದೆ ಎಂಬ ಪ್ರತೀತಿ ಇದೆ.
ಇದು ನಂಜನಗೂಡಿನಿಂದ ಸುಮಾರು ೪ಕಿ.ಮೀ. ದೂರದಲ್ಲಿರುವ ದೇಬೂರು ಗ್ರಾಮಕ್ಕೆ ಸೇರಿದ ಹೊಲವೊಂದರ ವಿಶೇಷ. ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ಸಂದರ್ಭದಲ್ಲಿ ವಿಭೂತಿಗೆ ಬಹಳಷ್ಟು ಬೇಡಿಕೆ ಇರುತ್ತ ದೆ. ಆಗ ಈ ಮಣ್ಣನ್ನು ಬಳಸಿ ವಿಭೂತಿಯ ಕಟ್ಟುಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ.
ನಂಜನಗೂಡು ಶ್ರೀಕಂಠೇಶರಸ್ವಾಮಿ ಬ್ಯಾಂಕ್
ನಂಜನಗೂಡಿನ ಈ ಪ್ರಥಮ ಬ್ಯಾಂಕ್ ೧೮೮೫ರಲ್ಲಿ ಪ್ರಾರಂಭವಾಯಿತು. ಇಂದಿನ ರಾಷ್ಟ್ರಪತಿ ರಸ್ತೆಯಲ್ಲಿ ಇತ್ತು. ಸುಮಾರು ೮೦ ವರ್ಷಗಳ ಕಾಲ ವ್ಯವಹಾರ ನಡೆಸಿತ್ತು. ಪರವಾನಗಿ ನವೀಕರಣವಾಗದ ಕಾರಣ ೧೯೬೫ರಲ್ಲಿ ಮುಚ್ಚಲ್ಪಟ್ಟಿತು.
ಇದಾದ ನಂತರ ೧೯೮೩ರಲ್ಲಿ ನಂಜನಗೂಡು ಶ್ರೀ ನಿವಾಸ ಬ್ಯಾಂಕ್ ೧೯೦೮ರಲ್ಲಿ ಶ್ರೀ ನಂಜುಂಡೇಶ್ವರ ಬ್ಯಾಂಕ್ ಸ್ಥಾಪನೆಯಾದ್ದವು. ಈಗ ಇವು ಕೂಡ ಕಣ್ಮರೆಯಾಗಿವೆ.