Mysore
21
overcast clouds

Social Media

ಬುಧವಾರ, 23 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ | ಚರಂಡಿ ಸೇರುತ್ತಿರುವ ನೀರಿಗೆ ‘ತಡೆ’ಹಾಕಿ

dgp murder case

ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ ನಿತ್ಯ ಸಾವಿರಾರು ಲೀಟರ್ ನೀರು, ಚರಂಡಿ ಸೇರುತ್ತಿದೆ.

ಸುಮಾರು ದೂರದವರೆಗೆ ನೀರು ಪೋಲಾಗಿ ಹೋಗುವುದರಿಂದ ರಸ್ತೆ ಗುಂಡಿಯಾಗಿದೆ. ಇದರಿಂದ ಸದ್ವಿದ್ಯಾ ಪಾಠ ಶಾಲೆ ಹಾಗೂ ವಿಶಾಲ್ ಮಾರ್ಟ್ ಎದುರು ರಸ್ತೆ ಯಲ್ಲಿ ಸಂಚರಿಸುವವರು , ವಿದ್ಯಾರ್ಥಿಗಳ ಮೈ ಮೇಲೆ ಕೆಸರಿನ ಸಿಂಚನವಾಗುತ್ತಿದೆ. ಸಂಬಂಽಸಿ ದವರಿಗೆ ಈ ವಿಷಯ ತಿಳಿದಿದ್ದರೂ ಕೆಲಸ ಮಾತ್ರ ಆಗಿಲ್ಲ. ಅರ್ಧಂಬರ್ಧ ಕೆಲಸ ಮಾಡಿ ದೊಡ್ಡ ಗುಂಡಿ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಗುಂಡಿಯಲ್ಲಿ ತುಂಬಿರುವ ನೀರಿನ ಜೊತೆಗೆ ರಸ್ತೆ ಬದಿಯಿಂದ ಬರುವ ಮಳೆಯ ನೀರು ಸೇರಿ, ದೊಡ್ಡದಾದ ನೀರಿನ ಪೈಪಿನೊಳಗೆ ಈ ಕೊಳಚೆ ನೀರು ಸೇರುತ್ತಿದೆ.

ಇದರಿಂದ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು,ಅದನ್ನು ಉಪಯೋ ಗಿಸುವ ಜನರಿಗೆ ಅನಾರೋಗ್ಯ ಉಂಟಾಗಬಹುದಾಗಿದ್ದು, ಸಂಬಂಽಸಿದವರು ತುರ್ತಾಗಿ ಗಮನಹರಿಸಬೇಕಾಗಿದೆ. -ಪ್ರೊ. ಕೆ. ಕಾಳಚನ್ನೇಗೌಡ, ಮೈಸೂರು

Tags:
error: Content is protected !!