Mysore
23
overcast clouds

Social Media

ಗುರುವಾರ, 15 ಜನವರಿ 2026
Light
Dark

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ ಪರಾರಿಯಾಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​​ ಮಾಡುತ್ತ ಕಾನ್ಸ್ ಟೇಬಲ್ ಜತೆಗೆ ಜಾಲಿ ಮಾಡುತ್ತಿದ್ದ ಮೋನಿಕಾ, ಇದೀಗ ಗಂಡನಿಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ. ಈಕೆಗೆ 12 ವರ್ಷದ ಮಗ ಕೂಡ ಇದ್ದ, ನನ್ನ ಗಂಡ ಸರಿ ಇಲ್ಲ, ಅವನಿಗೆ ಬುದ್ಧಿ ಹೇಳಿ ಎಂದು ಚಂದ್ರಲೇಔಟ್ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಇತ್ತ ಗಂಡ ಪೊಲೀಸ್​​ ಠಾಣೆಗೆ ಹೋಗುತ್ತಿದ್ದಂತೆ ಮೋನಿಕಾ ಮನೆಯಿಂದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣ ಜತೆಗೆ ಎಸ್ಕೇಪ್​ ಆಗಿದ್ದಾಳೆ. ಇದೀಗ ಪೊಲೀಸರಿಗೆ ಗಂಡ ತನ್ನ ಹೆಂಡತಿ ಮೋನಿಕಾ ವಿರುದ್ಧ ದೂರು ನೀಡಿದ್ದಾನೆ.

ಅತ್ತ ಈ ವಿಚಾರ ತಿಳಿದ ಹಿರಿಯ ಪೊಲೀಸ್​​ ಅಧಿಕಾರಿಗಳು ಕಾನ್ಸ್ಟೆಬಲ್ ರಾಘವೇಂದ್ರನನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ.

Tags:
error: Content is protected !!