Mysore
30
few clouds

Social Media

ಭಾನುವಾರ, 22 ನವೆಂಬರ್ 2026
Light
Dark

ಮಹಾತ್ಮರಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಬೇಕು: ಪ್ರತಾಪ್‌ ಸಿಂಹ

Mahadevappa doesn't even have the courtesy to talk about etiquette: Pratap Simha

ಮೈಸೂರು: ರವಿ ಹಂಜ್‌ ಅವರ ‘ಬಸವ ಮಂಟಪ’ ಪುಸ್ತಕದ ವಿವಾದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಬಸವಣ್ಣನವರಿಗೆ ಹೇಳುವವರು, ಕೇಳುವವರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ರವಿ ಹಂಜ್‌ ಪ್ರಚಾರಕ್ಕಾಗಿ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸಿದ್ದಾರೆ ಎಂದು ಆರೋಪಿಸಿದ ಪ್ರತಾಪ್‌ ಸಿಂಹ, ಮಹಾತ್ಮರು ಹಾಗೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಬಸವಣ್ಣನವರು ಎಲ್ಲ ಜಾತಿಗಳಿಗೂ ಆದರ್ಶವಾಗಿದ್ದಾರೆ. ಅವರ ಪ್ರೇರಣೆಯಿಂದ ಬೆಳೆದ ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸುವಲ್ಲಿಯೂ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಟ್ಟಿರು.

ಮಹಾತ್ಮರ ಬಗ್ಗೆ ಕೀಳಾಗಿ ಮಾತನಾಡುವ ಹಾಗೂ ಬರೆಯುವವರ ವಿರುದ್ಧ ಕಾನೂನು ಕ್ರಮ ಬಿಗಿಯಾಗಬೇಕು ಎಂದು ಪ್ರತಾಪ್‌ ಸಿಂಹ ಒತ್ತಾಯಿಸಿದರು.

Tags:
error: Content is protected !!