ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು ದೇಶದ ಜನತೆಗೆ ಮನವಿ ಮಾಡಿದ್ದೆ. ಜನರು ಖರೀದಿ ಕಡಿಮೆ ಮಾಡಿದ್ದು, ಬೆಲೆ ಇಳಿಯಲು ನೆರವಾಗಿದೆ ಎಂದು ಮೋದಿ ಹೇಳಿದ್ದಾರೆ.
‘ನಿಮ್ಮ ಸಲಹೆ ಪಾಲಿಸಿದ್ದೇವೆ, ನಮ್ಮ ಹಣ ಉಳಿದಿದೆ’ ಎಂದು ಜನರು ತಮ್ಮ ಬಳಿ ಹೇಳುತ್ತಿದ್ದಾರೆ ಎಂದೂ ಪ್ರಧಾನಿ ತಿಳಿಸಿದ್ದಾರೆ.
ಚಿನ್ನದ ಆಮದಿಗೆ ಬಳಕೆಯಾಗುವ ವಿದೇಶಿ ವಿನಿಮಯ ಉಳಿಸುವ ಉದ್ದೇಶದಿಂದ ಈ ಕರೆ ನೀಡಿದ್ದಾಗಿ ವಿವರಿಸಿದ್ದಾರೆ. ಇದೇ ವೇಳೆ, ಒಂದು ಹೊತ್ತಿನ ಊಟ ಬಿಡುವಂತೆ ಲಾಲ್ ಬಹದ್ದೂರ್ ಶಾಸ್ತ್ರಿ ನೀಡಿದ್ದ ಕರೆಗೆ ದೇಶ ಸ್ಪಂದಿಸಿದ್ದನ್ನು ಸ್ಮರಿಸಿದ್ದಾರೆ.




