Mysore
30
scattered clouds

Social Media

ಭಾನುವಾರ, 22 ನವೆಂಬರ್ 2026
Light
Dark

ಅಯ್ಯಪ್ಪ ಭಕ್ತರಿಗೆ ಅನುಕೂಲ: ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ ಸಾಗಿಸಲು ಅನುಮತಿ!

ನವದೆಹಲಿ: ಪವಿತ್ರ ಇರುಮುಡಿ ಕೆಟ್ಟನ್ನು ವಿಮಾನದ ಕ್ಯಾಬಿನ್‌ನಲ್ಲಿ ಕೈಚೀಲವಾಗಿ ಕೊಂಡೊಯ್ಯುವ ಅನುಮತಿಯನ್ನು ಸತತ ಮೂರನೇ ವರ್ಷವೂ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ತಿಳಿಸಿದ್ದಾರೆ.

ಈ ಸಂಬಂಧ ಬಿಸಿಎಎಸ್‌, ಸಿಐಎಸ್‌ಎಫ್‌ ಹಾಗೂ ವಿಮಾನ ನಿಲ್ದಾಣ ನಿರ್ವಾಹಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ಇರುಮುಡಿಯಲ್ಲಿರುವ ತೆಂಗಿನಕಾಯಿ ಸಾಗಣೆ ಕುರಿತು ಭದ್ರತಾ ತಪಾಸಣೆಯ ವೇಳೆ ಉಂಟಾಗುತ್ತಿದ್ದ ಗೊಂದಲಗಳನ್ನು ತಪ್ಪಿಸಿ, ಭಕ್ತರ ಯಾತ್ರೆ ಸುಗಮಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.

ಪವಿತ್ರ ವಸ್ತುಗಳನ್ನು ಪಾದರಕ್ಷೆಗಳ ಟ್ರೇಗಳಲ್ಲಿ ಇಡುವ ಪರಿಸ್ಥಿತಿ ತಪ್ಪಿಸಲು, ಇರುಮುಡಿ ತಪಾಸಣೆಗೆ ಪ್ರತ್ಯೇಕ ಟ್ರೇಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

 

Tags:
error: Content is protected !!