Light
Dark

flight

Homeflight

ನವದೆಹಲಿ : ಇಸ್ರೇಲ್ ಮತ್ತು ಉಗ್ರಗಾಮಿ ಗುಂಪು ಹಮಾಸ್ ನಡುವಿನ ಉದ್ವಿಗ್ನತೆಯ ಹೆಚ್ಚಿದ್ದು ಏರ್ ಇಂಡಿಯಾ ನವೆಂಬರ್ 30 ರವರೆಗೆ ಟೆಲ್ ಅವೀವ್‌ಗೆ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಅಕ್ಟೋಬರ್ 7 ರಿಂದ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಯಾವುದೇ ಭಾಗಕ್ಕೂ ವಿಮಾನ …

ಮುಂಬೈ : ದೇಶದ ವಾಣಿಜ್ಯ ರಾಜಧಾನಿ ಮುಂಬೈನಿಂದ ವಾರಣಾಸಿಗೆ ಹೊರಟಿದ್ದ ಆಕಾಶ ಏರ್ಲೈನ್ಸ್ ವಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ನಡೆದಿದೆ. ‌ ಏರ್ ಟ್ರಾಫಿಕ್ …

ಬೆಂಗಳೂರು : ಕರ್ನಾಟಕ ಬಂದ್ ಹಿನ್ನೆಲೆ ವಿಮಾನ ಹಾರಾಟಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಕಳೆದ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. …

ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ವಿಸ್ತಾರ ಕಂಪೆನಿಯ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಇಳಿದಿದ್ದು ಅಹಮದಾಬಾದ್-ದಿಲ್ಲಿ ವಿಮಾನದ ಪೈಲಟ್ ಕ್ಯಾಪ್ಟನ್ ಸೋನು ಗಿಲ್ ಅವರ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ. ಈ ಎರಡು ವಿಮಾನಗಳು ಒಟ್ಟು 300 …

ಮಿಯಾಮಿ : ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದ ಟಾಯ್ಲೆಟ್​ನಲ್ಲಿ ಪೈಲಟ್​ ಮೃತಪಟ್ಟಿದ್ದು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಾಣಿಜ್ಯ ವಿಮಾನದ ಟಾಯ್ಲೆಟ್​ನಲ್ಲಿ ಕುಸಿದುಬಿದ್ದು ಪೈಲಟ್ ಸಾವನ್ನಪ್ಪಿದ್ದಾರೆ. ತಕ್ಷಣವೇ ವಿಮಾನವನ್ನು ಪನಾಮದಲ್ಲಿ ತುರ್ತು ಭೂಸ್ಪರ್ಶ …

ಬೆಂಗಳೂರು : ಪ್ಯಾರೀಸ್‌ ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ವಿಮಾನದ ದ್ವಾರ ತೆರೆಯಲು ಪ್ರಯತ್ನಿಸಿದ ಆರೋಪದಡಿ ಓರ್ವ ಯುವಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರಾಜಮಂಡ್ರಿ ಮೂಲದ ವೆಂಕಟ್‌ ಮೋಹಿತ್‌(29) ಬಂಧಿತ. ಆರೋಪಿಯು …

ಚಾಮರಾಜನಗರ : ಇಲ್ಲಿನ ಭೋಗಪುರ ಬಳಿ ಲಘು ವಿಮಾನವೊಂದು ಪತನವಾಗಿದ್ದು ಇಬ್ಬರು ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಲಭಿಸುತ್ತಿದ್ದಂತೆ ಇಬ್ಬರೂ ಪೈಲಟ್ ಗಳು ಪ್ಯಾರಾಚೂಟ್ ಮೂಲಕ ಕೆಳಗಿಳಿದಿದ್ದಾರೆ. ವಿಮಾನ ವೇಗದಲ್ಲಿ ಬಂದು ನೆಲಕ್ಕಪ್ಪಳಿಸುತ್ತಿದ್ದಂತೆ …

ಬೆಳಗಾವಿ : ತರಬೇತಿ ವಿಮಾನವೊಂದು ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬದಿಯ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಏರ್ ಫೋರ್ಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಳಗ್ಗೆ 9.30 …

ನವದೆಹಲಿ : ಲಂಡನ್‌ನತ್ತ ಹಾರಾಟ ನಡೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಗದ್ದಲ ಸೃಷ್ಟಿಸಿದ ಪರಿಣಾಮ, ವಿಮಾನವು ಸೋಮವಾರ ದೆಹಲಿಗೆ ವಾಪಸ್‌ ಆಗಿದೆ. ಮೂಲಗಳ ಪ್ರಕಾರ, 225 ಪ್ರಯಾಣಿಕರಿದ್ದ 'AI 111' ವಿಮಾನವು, ಪ್ರಯಾಣಿಕ ಗಲಾಟೆ ಮಾಡಿದ ಬಳಿಕ ದೆಹಲಿಯ ಇಂದಿರಾ …

ನವದೆಹಲಿ : ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಮಂಗಳವಾರ ತೆಲಂಗಾಣದ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಆರ್‌ಜಿಐಎ) ತುರ್ತು ಭೂಸ್ಪರ್ಶ ಮಾಡಿದೆ. 137 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ 6E897 ವಿಮಾನ ಶಂಶದಾಬಾದ್ …