ಚಾಮರಾಜನಗರ : ಇಲ್ಲಿನ ಭೋಗಪುರ ಬಳಿ ಲಘು ವಿಮಾನವೊಂದು ಪತನವಾಗಿದ್ದು ಇಬ್ಬರು ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಲಭಿಸುತ್ತಿದ್ದಂತೆ ಇಬ್ಬರೂ ಪೈಲಟ್ ಗಳು ಪ್ಯಾರಾಚೂಟ್ ಮೂಲಕ ಕೆಳಗಿಳಿದಿದ್ದಾರೆ. ವಿಮಾನ ವೇಗದಲ್ಲಿ ಬಂದು ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಈ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ. ಕಳೆದ ಮಂಗಳವಾರವಷ್ಟೇ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಸಾಂಬ್ರಾ ನಿಲ್ದಾಣದಿಂದ ಹೊರಟಿದ್ದ ಲಘು ತರಬೇತಿ ವಿಮಾನ ಹೊಲವೊಂದರಲ್ಲಿ ತುರ್ತು ಭೂಸ್ಪರ್ಷ ಮಾಡಿತ್ತು. ಈ ಘಟನೆಯಲ್ಲೂ ಪೈಲಟ್ ಗಳು ಅಪಾಯವಿಲ್ಲದೆ ಪಾರಾಗಿದ್ದರು. ಇದರ ಬೆನ್ನಿಗೇ ಭೋಗಪುರ ಹೊರವಲಯದಲ್ಲಿ ಈ ಘಟನೆ ನಡೆದಿದೆ.