Mysore
25
broken clouds

Social Media

ಶನಿವಾರ, 12 ಜುಲೈ 2025
Light
Dark

ಗದ್ದಲ ಸೃಷ್ಟಿಸಿದ ಪ್ರಯಾಣಿಕ : ಲಂಡನ್‌ಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್

ನವದೆಹಲಿ : ಲಂಡನ್‌ನತ್ತ ಹಾರಾಟ ನಡೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಗದ್ದಲ ಸೃಷ್ಟಿಸಿದ ಪರಿಣಾಮ, ವಿಮಾನವು ಸೋಮವಾರ ದೆಹಲಿಗೆ ವಾಪಸ್‌ ಆಗಿದೆ.
ಮೂಲಗಳ ಪ್ರಕಾರ, 225 ಪ್ರಯಾಣಿಕರಿದ್ದ ‘AI 111’ ವಿಮಾನವು, ಪ್ರಯಾಣಿಕ ಗಲಾಟೆ ಮಾಡಿದ ಬಳಿಕ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಐಜಿಐಎ) ವಿಮಾನಕ್ಕೆ ಹಿಂದಿರುಗಿತು ಎನ್ನಲಾಗಿದೆ. ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನನ್ನು ನಿಲ್ದಾಣದಲ್ಲಿ ಕೆಳಗಿಳಿಸಿದ ಬಳಿಕ, ವಿಮಾನವು ಲಂಡನ್‌ನ ಹೀಥ್ರೋ ಕಡೆಗೆ ಹಾರಾಟ ನಡೆಸಿದೆ. ಈ ಬಗ್ಗೆ ಏರ್‌ ಇಂಡಿಯಾ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!