ಬೆಳಗಾವಿ : ತರಬೇತಿ ವಿಮಾನವೊಂದು ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬದಿಯ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಏರ್ ಫೋರ್ಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಳಗ್ಗೆ 9.30 ಕ್ಕೆ ಸಾಂಬ್ರಾ ಏರ್‌ಪೋರ್ಟ್ ನಿಂದ ರೆಡ್‌ಬರ್ಡ್ ಸಂಸ್ಥೆಗೆ ಸೇರಿದ VT-RBF ತರಬೇತಿ ವಿಮಾನ ಟೇಕಾಫ್ ಆಗಿತ್ತು. ವಿಮಾನದಲ್ಲಿ ಇಬ್ಬರು ಪೈಲೆಟ್ಗಳು ಓಡಿಸುತ್ತಿದ್ದರು. ಈ ವೇಳೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಹೊನ್ನಿಹಾಳ ಗ್ರಾಮದ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಇಬ್ಬರು ಪೈಲೆಟ್‌ಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವಾಯುಸೇನೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.