Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ರಾಜ್ಯದ ಜಲಾಶಯಗಳಲ್ಲಿ ಶೇ.64ರಷ್ಟು ನೀರು ಸಂಗ್ರಹ: ಅನ್ನದಾತರಲ್ಲಿ ಮನೆಮಾಡಿದ ಸಂತಸ

krs damm

ಬೆಂಗಳೂರು: ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡು ಮಳೆ ಕೊರತೆ ಎದುರಾಗಿದ್ದರೂ ಪ್ರಮುಖ ನದಿಗಳ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಶೇ.64ರಷ್ಟು ನೀರು ಸಂಗ್ರಹವಾಗಿದೆ.

ಕಾವೇರಿ ಹಾಗೂ ಕೃಷ್ಣ ಕೊಳ್ಳದ ಜಲಾನಯನ ಭಾಗದಲ್ಲಿ ಮುಂಗಾರು ಆರಂಭಗೊಂಡಾಗಿನಿಂದಲೂ ಸತತ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 14 ಪ್ರಮುಖ ಜಲಾಶಯಗಳ ಗರಿಷ್ಠ ನೀರಿನ ಸಂಗ್ರಹ ಸಾಮಥ್ಯ 895.62 ಟಿಎಂಸಿ ಅಡಿಗಳಾಗಿದ್ದು, ಪ್ರಸ್ತುತ 574.82 ಟಿಎಂಸಿ ಅಡಿ ನೀರು ಸಂಗ್ರವಾಗಿದೆ. ಸುಮಾರು 2,92,000 ಕ್ಯೂಸೆಕ್ಸ್‌ನಷ್ಟು ನೀರಿನ ಒಳಹರಿವು ಇದ್ದು, ಸುಮಾರು 2 ಲಕ್ಷ ಕ್ಯೂಸೆಕ್‍ನಷ್ಟು ಹೊರಹರಿವು ಇದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 259.81 ಟಿಎಂಸಿ ಅಡಿಯಷ್ಟು ಮಾತ್ರ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ನೀರಿನ ಸಂಗ್ರಹವಿದ್ದು, ಕುಡಿಯುವ ನೀರು ಹಾಗೂ ನೀರಾವರಿ ಪ್ರದೇಶಗಳ ಬೆಳೆಗಳಿಗೆ ನೀರು ಒದಗಿಸುವ ಸಮಸ್ಯೆ ಸದ್ಯಕ್ಕೆ ಪರಿಹಾರವಾದಂತಾಗಿದೆ.

ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳ ಒಟ್ಟು ಗರಿಷ್ಠ ಸಾಮಥ್ರ್ಯ 328.18 ಟಿಎಂಸಿ ಅಡಿ ಆಗಿದ್ದು, ಪ್ರಸ್ತುತ 149.39 ಟಿಎಂಸಿ ಅಡಿಯಷ್ಟು ನೀರಿದೆ. ಒಟ್ಟಾರೆ ಶೇ.46ರಷ್ಟು ನೀರು ಸಂಗ್ರಹವಾಗಿದ್ದು, 70 ಸಾವಿರ ಕ್ಯೂಸೆಕ್‍ಗೂ ಅಧಿಕ ನೀರಿನ ಒಳಹರಿವಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 67.70 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು. ಈಗಾಗಲೇ ಕೆಆರ್‍ಎಸ್ ಜಲಾಶಯ ಭರ್ತಿಯಾಗಿ ಬಾಗಿನವನ್ನು ಅರ್ಪಿಸಲಾಗಿದೆ.
ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳ ಒಟ್ಟು ಗರಿಷ್ಠ ನೀರಿನ ಸಾಮರ್ಥ್ಯ 114.57 ಟಿಎಂಸಿ ಅಡಿ, ಪ್ರಸ್ತುತ 105.51 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಶೇ.92ರಷ್ಟು ಭರ್ತಿಯಾಗಿವೆ.

Tags:
error: Content is protected !!