Mysore
25
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಓದುಗರ ಪತ್ರ: ದುಷ್ಕೃತ್ಯ ನಿಯಂತ್ರಿಸಲು ಕಾನೂನು ರೂಪಿಸಬೇಕು

dgp murder case

ಚಾಮರಾಜನಗರ ತಾಲ್ಲೂಕಿನ ಮಸಾಣಪುರ ಗ್ರಾಮದಲ್ಲಿ ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂಥ ಹೇಯ ಕೃತ್ಯವಾಗಿದೆ.ಈ ಕೃತ್ಯವನ್ನು ಎಸಗಿರುವ ಆರೋಪಿಯನ್ನು ಸ್ವತಃ ಗ್ರಾಮಸ್ಥರೇ ನೇರವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕೃತ್ಯವನ್ನು ಎಸಗಿರುವ ವ್ಯಕ್ತಿಯ ಹಿಂದೆ ಕೆಲಸ ಮಾಡಿರುವ ಕಾಣದ ಕೈಗಳು ಯಾವುದು ಎಂದು ತಕ್ಷಣವೇ ಹುಡುಕಿ ಅವರಿಗೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆ ವಿಧಿಸಲೇಬೇಕು.ಅಲ್ಲದೇ ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಬಾಬಾಸಾಹೇಬರಲ್ಲದೆ ಬೇರೆ ಯಾವುದೇ ರಾಷ್ಟ್ರ ನಾಯಕರಿಗೂ ಈ ರೀತಿಯ ಅಪಮಾನಗಳು ಆಗದಂತೆ ಕಾನೂನು ರೂಪಿಸಲು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು.

 – ರವಿಕುಮಾರ್, ಹರಳಿಪುರ 

Tags:
error: Content is protected !!