Mysore
23
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ ಕಾರಣ. ಈ ಹಿಂದೆ ಹೀಗೆ ಆಗುತ್ತಿರಲಿಲ್ಲ.

ಕಾರಣ ಮೆಟ್ಟಿಲುಗಳ ಮೂಲಕ ಮತ್ತು ಬಸ್ಸುಗಳಲ್ಲಿ ಬಂದ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಮುಂದೆಯೇ ನಿಂತು ತಾಯಿ ಚಾಮುಂಡಿಗೆ ಕೈ ಮುಗಿದು ಬೆಟ್ಟದಲ್ಲಿಯೇ ಇರುವ ಇತರ ದೇವಸ್ಥಾನ ಗಳಿಗೆ ತೆರಳಿ ದೇವರ ದರ್ಶನ ಮಾಡಿಕೊಂಡು ತೆರಳುತ್ತಿದ್ದರು.ಆಗ ವಿಪರೀತ ಜನ ಸಂದಣಿ ಉಂಟಾಗುತ್ತಿರಲಿಲ್ಲ. ಆದರೆ ಈಗ ಮಾಡಿರುವ ಅವೈಜ್ಞಾನಿಕ ಮಾರ್ಪಾಡಿನಿಂದ ಮೆಟ್ಟಿಲು ಹತ್ತಿ ಬರುವವರು ಮತ್ತು ಬಸ್‌ನಲ್ಲಿ ಬರುವ ಭಕ್ತರು ಬ್ಯಾರಿಕೇಡ್ ಚಕ್ರವ್ಯೂಹದೊಳಗೆ ಸಿಲುಕಿ ದೇವಿ ದರ್ಶನ ಮಾಡಿಯೇ ತೆರಳಬೇಕು ಎಂಬ ತೀರ್ಮಾನವನ್ನು ಅಧಿಕಾರಿವರ್ಗ ಮಾಡಿದೆ.

ಅಧಿಕಾರಿ ವರ್ಗ ಇನ್ನಾದರೂ ಮೆಟ್ಟಿಲು ಹತ್ತಿ ಬರುವವರು ಮತ್ತು ಬಸ್ ಮೂಲಕ ಬರುವ ಭಕ್ತರಿಗೆ ಇರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಹೊರಗಡೆ ನಿಂತು ಕೈ ಮುಗಿದು ಹೋಗುವಂತೆಯೇ ವ್ಯವಸ್ಥೆ ಮಾಡಿ ಭಕ್ತರಿಗೆ ಬೃಹತ್ ಎಲ್ ಇ ಡಿ ಪರದೆಯ ಮೂಲಕ ತಾಯಿ ಚಾಮುಂಡಿ ದರ್ಶನ ಮಾಡಿಸಿದರೆ ಜನ ಸಂದಣಿ ಕಡಿಮೆ ಆಗುತ್ತದೆ. ದೇವಿಯ ದರ್ಶನ ಮಾಡಿಯೇ ತೆರಳುತ್ತೇವೆ ಎನ್ನುವ ಭಕ್ತರಿಗೆ ದೇವಸ್ಥಾನದ ಎಡ ಭಾಗದಲ್ಲಿ (ಧರ್ಮ ದರ್ಶನ ಸಾಲು ನಿಲ್ಲುವ ಕಡೆ) ಬ್ಯಾರಿಕೇಡ್ ವ್ಯವಸ್ಥೆ ಮಾಡಲಿ.

-ಅಹಲ್ಯ ಸಿ.ನಾ.ಚಂದ್ರ, ಮೈಸೂರು

Tags:
error: Content is protected !!