ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ ಬರೆಯುತ್ತಿದ್ದಾರೆ. ಅಂದರೆ ಸುಮಾರು ಒಂದು ಸಾವಿರ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ದೊರಕುತ್ತದೆ.
ವಿಶೇಷ ಸಂಗತಿಯೆಂದರೆ ಈ ಸಲದ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ ಎಂ ಎ ಪದವೀಧರರು, ಬಿ.ಇ. ವ್ಯಾಸಂಗ ಮಾಡಿರುವವರೂ ಅಲ್ಲದೇ ಪಿ ಹೆಚ್. ಡಿ. ಮಾಡಿರುವವರೂ ಅರ್ಜಿ ಸಲ್ಲಿಸಿದ್ದಾರೆ. ( ಕನಿಷ್ಠ ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ), ಸರ್ಕಾರಿ ಉದ್ಯೋಗಕ್ಕಾಗಿ ಇತ್ತೀಚಿನ ದಿನಗಳಲ್ಲಿ ತೀವ್ರ ಪೈಪೋಟಿ ಇದೆ. ಇದಕ್ಕೆಲ್ಲ ಕಾರಣ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ.
-ಬೂಕನಕೆರೆ ವಿಜೇಂದ್ರ, ಮೈಸೂರು


