Mysore
23
overcast clouds

Social Media

ಬುಧವಾರ, 17 ಜೂನ್ 2026
Light
Dark

ಓದುಗರ ಪತ್ರ: ಲಂಚದ ಬಗ್ಗೆ ಮಾತೇಕೆ?

ಓದುಗರ ಪತ್ರ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಲು ಸರ್ಕಾರಿ ನೌಕರರಿಗೆ ಅಥವಾ ಅಧಿಕಾರಿಗಳಿಗೆ ೧೦ ರೂ. ಲಂಚವನ್ನು ಕೂಡ ನೀಡಬೇಡಿ ಎಂದು ಸಾರ್ವಜನಿಕರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಪ್ಪಣೆ ಕೊಡಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೇ ಯಾವ ಕೆಲಸವೂ ಆಗುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಲಂಚ ಎಂಬ ಹಗಲು ದರೋಡೆಯಿಂದ ಜನಸಾಮಾನ್ಯರು ಹೈರಾಣರಾಗುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಜರಿಗೆ ತಂದ ಇ- ಖಾತೆ ಅಥವಾ ಇ-ಸ್ವತ್ತು ಮಾಡಿಸಿಕೊಳ್ಳಲು ಅಥವಾ ಎ ಖಾತಾ/ ಬಿ ಖಾತಾ ಪಡೆದುಕೊಳ್ಳಲು ಸಾರ್ವಜನಿಕರು ಹತ್ತಾರು ಸಾವಿರ ರೂಪಾಯಿಗಳನ್ನು ಲಂಚದ ರೂಪದಲ್ಲಿ ಸಂಬಂಧಪಟ್ಟ ನೌಕರನಿಗೆ ಅಥವಾ  ಅಧಿಕಾರಿಗೆ ನೀಡಲೇ ಬೇಕು. ಲಂಚ ನೀಡದ ವ್ಯಕ್ತಿಗಳ ಅರ್ಜಿಗಳು ಎ ಒಂದು ಕಡೆ ಬಿಸಾಡಿಲ್ಪಟ್ಟಿರುತ್ತವೆ. ಲಂಚ ಕೊಟ್ಟಾಗ ಮಾತ್ರ ಅಂತಹ ಅರ್ಜಿಗಳಿಗೆ ಮರುಜೀವ ಬರುತ್ತದೆ. ಈ ರೀತಿ ಲಂಚ ಎಂಬುದು ಸಾರ್ವಜನಿಕ ರಂಗದಲ್ಲಿ ಬೃಹದಾಕಾರವಾಗಿ ಬೆಳೆದು ಬಂದಿದೆ. ಎಷ್ಟೇ ಪ್ರಯತ್ನ ಪಟ್ಟರೂ ಲಂಚಾಸುರನ ಸಂಹಾರವಾಗದೇ ದಿನೇ ದಿನೇ ತನ್ನ ಆಕಾರ ಮತ್ತು ಸ್ವರೂಪವನ್ನು ವೃದ್ಧಿಸಿಕೊಳ್ಳುತ್ತಲೇ ಇದ್ದಾನೆ.

‘ಅವನಿಗೆ’ ರಾಜಕಾರಣಿಗಳ ಪರೋಕ್ಷ ಬೆಂಬಲ ಅಥವಾ ಕುಮ್ಮಕ್ಕು ಇರುತ್ತದೆ ಎಂಬುದು ಜನಸಾಮಾನ್ಯರಿಗೆ ತಿಳಿದೇ ಇದೆ. ಇಂತಹ ಸಂದರ್ಭದಲ್ಲಿ ಲಂಚ ನಿರ್ಮೂಲನೆಗೆ ಹೊರಟಿರುವ ಡಿ.ಕೆ.ಶಿವಕುಮಾರ್‌ರವರ ಪ್ರಯತ್ನ ವ್ಯರ್ಥ ಕಸರತ್ತಲ್ಲದೇ ಬೇರೇನೂ ಅಲ್ಲ.

 -ಕೆ.ವಿ.ವಾಸು,

 

Tags:
error: Content is protected !!