ಮೈಸೂರು: ಸಿದ್ದರಾಮಯ್ಯ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಜಾತಿಗಣತಿ ಜಾರಿಗೆ ತರಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 10 ವರ್ಷಗಳ ನಂತರ ಜಾತಿಗಣತಿ ಜಾರಿಗೆ ಹೊರಟಿದ್ದಾರೆ. ತಮ್ಮ ಸ್ಥಾನವನ್ನ ಭದ್ರಪಡಿಸಿಕೊಳ್ಳಲು ಜಾರಿಗೆ ತರುವ ಯತ್ನ ನಡೆಯುತ್ತಿದೆ. ಕಾಂತರಾಜ ವರದಿಯನ್ನು 10 ವರ್ಷದ ಬಳಿಕ ಜಾರಿಗೆ ತರಲು ಹೋಗಿದ್ದು ಅವೈಜ್ಞಾನಿಕ. 150 ಕೋಟಿ ರೂ ವೆಚ್ಚ ಮಾಡಿ ತಯಾರಿಸಿದ ವರದಿ ಬುಟ್ಟಿಗೆ ಹಾಕಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಭ್ರಷ್ಟಾಚಾರ ರಾಜ್ಯಾದ್ಯಂತ ತಾಂಡವವಾಡುತ್ತಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲ ರಾಜ್ಯಕ್ಕೆ ಬಂದಿದ್ರು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಿಎಂ ರಾಜೀನಾಮೆ ಪಡೆಯಲು ಭೂಮಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೆ ಅವರು ಸೈಟ್ ವಾಪಸ್ ನೀಡಿದ್ರು? ಸಚಿವರಾಗಿದ್ದ ನಾಗೇಂದ್ರ ಯಾಕೆ ರಾಜೀನಾಮೆ ನೀಡಿದ್ರು? ಬಿಜೆಪಿ ನಡೆಸಿದ ಜನಾಕ್ರೋಶ ಯಾತ್ರೆಯಿಂದ ಜನ ಜಾಗೃತರಾಗಿದ್ದಾರೆ. ಈ ಸರ್ಕಾರದ ವಿರುದ್ಧ ಶೀಘ್ರ ದಂಗೆ ಹೇಳ್ತಾರೆ. ಸಿಎಂ ಅಧಿಕೃತವಾಗಿ ರಾಜೀನಾಮೆ ಕೊಡುವುದೊಂದೇ ಭಾಗ್ಯ ಎಂದು ಲೇವಡಿ ಮಾಡಿದರು.
ಇನ್ನು ಎಲ್ಲರೂ ಸಿಎಂ ರಾಜೀನಾಮೆ ಪಡೆದು ದೆಹಲಿಗೆ ಕಳಿಸಲು ತೀರ್ಮಾನ ಮಾಡಿದ್ದಾರೆ. ಅಹಿಂದ ಹೆಸರನ್ನು ಹೇಳಿಕೊಂಡು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲ ಅಹಿಂದ ವರ್ಗಗಳನ್ನ ಅವರು ಕಡೆಗಣಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸ್ಥಾನ ಪಲ್ಲಟ ಆಗಲಿದೆ. ಅತಿ ಶೀಘ್ರದಲ್ಲೆ ಸಿಎಂ ರಾಜೀನಾಮೆ ನೀಡುತ್ತಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಣಗಳಾಗ್ತಿವೆ. ಮೊನ್ನೆ ರಾಮನಗರದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿ.ಆರ್.ಪಾಟೀಲ್ ಲಾಟರಿ ಸಿಎಂ ಎಂದಿದ್ದಾರೆ ದೇವರಾಜ ಅರಸು ಅವರ ದಾಖಲೆ ಮುರಿತೀನಿ ಎಂದಿದ್ದರು. ಅದೇ ರೀತಿ ರಾಜೀನಾಮೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.