Mysore
26
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

mahadevappa

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ ಸಚಿವ ಡಾ.ಎಚ್. ಸಿ.ಮಹದೇವಪ್ಪರವರನ್ನು ಕೈಬಿಟ್ಟಿರುವುದಕ್ಕೆ ದಲಿತ ಸಂಘರ್ಷ ಸಮಿತಿ ಒಕ್ಕೂಟವು ತೀವ್ರ ಅಸವಾಧಾನವನ್ನುವ್ಯಕ್ತಪಡಿಸಿದೆ.

ದಸಂಸದ ಹಿರಿಯ ನಾಯಕರು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಕಾಂಗ್ರೆಸ್ ಸರ್ಕಾರವು ಹಿರಿಯ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಇರುವುದು ಸರಿಯಲ್ಲ.ಸಮಾನತೆ, ಸಾಮಾಜಿಕ ನ್ಯಾಯ ವೈಚಾರಿಕ ಪ್ರಜ್ಞೆಯ ಸೈದ್ಧಾಂತಿಕ ‘ದಲಿತ ರಾಜಕೀಯ ನಾಯಕತ್ವ‘ ವನ್ನೇ ಹೊಸಗಿ ಹಾಕುವ ’ ಚಾಳಿ’ ಯನ್ನು ಕಾಂಗ್ರೆಸ್ ಅಭ್ಯಾಸ ವಾಡಿಕೊಂಡಂತಿದೆ ಎಂದು ದಸಂಸ ರಾಜ್ಯಸಂಚಾಲಕ ಗುರುಪ್ರಸಾದ್‌ಕೆರಗೋಡು, ರಾಜ್ಯ ಸಂಘಟನಾ ಸಂಚಾಲಕ ಇಂದೂಧರ ಹೊನ್ನಾಪುರ, ರಾಜ್ಯಸಂಯೋಜಕ ವಿ.ನಾಗರಾಜ್, ರಾಜ್ಯಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಘಟನಾ ಸಂಚಾಲಕ ಎನ್.ಮುನಿಸ್ವಾಮಿ ಅತೃಪ್ತಿವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಈ ಹಿಂದೆ ಕೂಡ ದಲಿತ ಸಾಂಸ್ಕೃತಿಕ ಹಾಗೂ ಸ್ವಾಭಿಮಾನಿ ನಾಯಕರಾಗಿದ್ದ ಬಿ.ಬಸವಲಿಂಗಪ್ಪರವರನ್ನೂ ಹೀಗೇ…ಕಡೆಗಣಿಸುವ ಮೂಲಕ ಕಾಂಗ್ರೆಸ್ ಅಪಮಾನ ಮಾಡಿತ್ತು. ಕಾಂಗ್ರೆಸ್‌ನಿಂದ ಹೀಗೆ ಕಡೆಗಣಿಸಲ್ಪಟ್ಟ ದಲಿತ ರಾಜಕಾರಣಿಗಳ ಪಟ್ಟಿ ಬಹಳ ದೊಡ್ಡದೇ ಇದೆ. ಎನ್. ರಾಚಯ್ಯ, ಕೆ.ಎಚ್. ರಂಗನಾಥ್, ವಿ.ಶ್ರೀನಿವಾಸ್ ಪ್ರಸಾದ್…. ಅಷ್ಟೇ ಏಕೆ, ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಮುಖ್ಯಮಂತ್ರಿ ವಾಡಬಹುದಾಗಿದ್ದ ಅವಕಾಶವನ್ನು ಕಾಂಗ್ರೆಸ್ ವಿನಾಕಾರಣ ಹಾಳು ಮಾಡಿತ್ತು. ಹಾಗಾಗಿ, ಈವರೆಗೂ ದಲಿತ ಸಮುದಾಯದ ಮುಖ್ಯಮಂತ್ರಿ ಕನಸು ಕನಸಾಗಿಯೇ ಉಳಿದಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಈ ದಲಿತ ವಿರೋಧೀ ಧೋರಣೆ ಹೀಗಿಯೇ ಮುಂದುವರಿದರೆ ನಾಳೆ ಈಗ ಹಾಲಿ ಸಚಿವರಾಗಿರುವ ಎಲ್ಲಾ ದಲಿತ ಮಂತ್ರಿಗಳು ಒಂದು ಹಂತದವರೆಗೆ ಬಂದ ಮೇಲೆ ಮುಂದೆ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆಂದೆನಿಸಿದ ಕೂಡಲೇ ಈಗ ಡಾ.ಎಚ್.ಸಿ. ಮಹದೇವಪ್ಪನವರಿಗಾಗಿರುವ ಸ್ಥಿತಿ ಇವರ್ಯಾರಿಗೂ ಆಗುವುದಿಲ್ಲ ಎಂಬುದನ್ನು ಹೇಳಲಾಗದು ಎಂದು ಅನುಮಾನವ್ಯಕ್ತಪಡಿಸಿದ್ದಾರೆ. ಕಳೆದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ೧೩೬ ಶಾಸಕರು ಕಾಂಗ್ರೆಸ್ ನಿಂದ ಆಯ್ಕೆಯಾಗಲು ಡಾ.ಎಚ್.ಸಿ. ಮಹದೇವಪ್ಪ ಕೂಡ ಒಬ್ಬರು ಪ್ರಮುಖ ಕಾರಣ ಎಂಬುದನ್ನು ಕಾಂಗ್ರೆಸ್ ಹೈ ಕಮಾಂಡ್ ಮರೆತಂತಿದೆ. ದಲಿತ ಸಂಘಟನೆಗಳನ್ನೆಲ್ಲಾ ಒಗ್ಗೂಡಿಸಿ ೨೦೨೨ರ ಡಿಸೆಂಬರ್ ೬ ರಂದು ದೊಡ್ಡ ಮಟ್ಟದ ಸಮಾವೇಶವನ್ನು ಸಂಘಟಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಮಾಡಲು ಹಾಗೂ ೨೦೨೩ರಲ್ಲಿ ರಾಜ್ಯದಾದ್ಯಂತ ದಲಿತ ಸಂಘಟನೆಗಳ ಮುಖಂಡರು ಪ್ರವಾಸ ವಾಡಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಕ್ಕೆ ಬೆಂಬಲವಾಗಿ ನಿಂತಿದ್ದವರು ಮಹದೇವಪ್ಪ ಎನ್ನುವುದನ್ನು ಅರಿಯಬೇಕು ಎಂದು ಹೇಳಿದ್ದಾರೆ.

ದಲಿತ ಸಮುದಾಯದ ಮಹದೇವಪ್ಪನವರನ್ನೇ ಕಡೆಗಣಿಸುವ ಮೂಲಕ ಕಾಂಗ್ರೆಸ್ ನ ಹೈ ಕಮಾಂಡ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರು ದಲಿತ ಸಮುದಾಯದ ನಂಬಿಕೆಗೆ ದ್ರೋಹವೆಸಗಿದ್ದಾರೆ ಎಂದುಕಿಡಿಕಾರಿದ್ದಾರೆ.

 

ಹೈ ಕಮಾಂಡ್ ನಿಂದ ಎರಡನೇ ಕಂತಿನ ಸಚಿವರ ಪಟ್ಟಿ ಅನುಮೋದನೆಗೊಂಡು ಬಂದ ಮೇಲೂ ಕೂಡ ಪದೇ ಪದೇ ಹೆಸರುಗಳ ಬದಲಾವಣೆ ಮಾಡಿದ್ದು, ಪ್ರವಾಣ ವಚನದ ಸಮಯವನ್ನು ಮುಂದೂಡಿದ್ದು, ಒಬ್ಬರು ಮಹಿಳಾ ಹೆಸರನ್ನು ತಡೆಹಿಡಿದಿದ್ದು, ಮತ್ತೆ ಈಗಲೂ ಕೂಡ ಪ್ರಮಾಣ ವಚನ ಸ್ವೀಕರಿಸಿದವರಿಂದ ರಾಜೀನಾಮೆ ಕೊಡಿಸಿ ಮತ್ತೊಬ್ಬರಿಗೆ ಮಂತ್ರಿ ಮಾಡಲೊರಟಿರುವುದು, ಇಷ್ಟೆಲ್ಲಾ ಪ್ರಹಸನ ಸಾಧ್ಯವಾಗುವುದಾದರೆ ಇದೇ ಮಾನದಂಡವನ್ನು ಡಾ.ಎಚ್.ಸಿ.ಮಹದೇವಪ್ಪ ನವರಿಗೆ ಏಕೆ ಅಳವಡಿಸಬಾರದು? ದಲಿತರಿಗೊಂದು ನ್ಯಾ ಹಾಗೂ ಇತರ ಪ್ರಬಲ ಜಾತಿಗಳಿಗೊಂದು ನ್ಯಾಯವೇ? ಇದೆನಾ ಕಾಂಗ್ರೆಸ್ ನ ಮನಸ್ಥಿತಿ ಎಂದು ಪ್ರಶ್ನಿಸಿದ್ದಾರೆ. ಪ್ರಜ್ಞಾವಂತ ದಲಿತ ಸಮುದಾಯ ಈ ವಿದ್ಯಮಾನವನ್ನೆಲ್ಲಾ ಸೂಕ್ಷತ್ಮವಾಗಿ ಗಮನಿಸುತ್ತಿದೆ ಮತ್ತು ಇದರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟವು ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸಲು ಬಯಸುತ್ತದೆ ಎಂದು ತಿಳಿಸಿದ್ದಾರೆ.

Tags:
error: Content is protected !!