Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ : ಸಚಿವ ಸತೀಸ್‌ ಜಾರಕಿಹೊಳಿ ಕಿಡಿ

ಮೈಸೂರು : ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ವಿಶ್ವದ ಇತರ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಆದರೆ ಭಾರತದಲ್ಲಿ ಬೆಳೆಯಲು ಮನುವಾದಿಗಳು ಬಿಡಲಿಲ್ಲ ಎಂದು ಸಚಿವ ಸತೀಸ್‌ ಜಾರಕಿಹೊಳಿ ಕಿಡಿಕಾರಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಬೌದ್ಧ ಧರ್ಮ ಕ್ರಿ.ಪೂ ದಲ್ಲಿ ಅಸ್ತಿತ್ವಕ್ಕೆ ಬಂದು ವಿಶ್ವದ ಇತರ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಆದರೆ ಭಾರತದಲ್ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ, ಬೌದ್ಧ ಧರ್ಮ ಬೆಳೆಯುವುದನ್ನು ತಡೆದರು ಎಂದು ಆರೋಪಿಸಿದ್ದಾರೆ.

ಬುದ್ಧ ಅಂಬೇಡ್ಕರ್ ಚಿಂತನೆ ಹೆಚ್ಚು ಪ್ರಚುರಪಡಿಸಬೇಕು
ಬುದ್ಧ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಹೆಚ್ಚು ಪ್ರಚುರಪಡಿಸಬೇಕು. ಈ ಬೌದ್ಧ ಮಹಾ ಸಮ್ಮೇಳನ ಕೇವಲ ದಲಿತರು, ಬೌದ್ಧರಿಗೆ ಸೀಮಿತವಾಗಬಾರದು. ಎಲ್ಲ ವರ್ಗದ ಜನರು ಭಾಗಿಯಾಗಿ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲೆಡೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:-ರಾಜ್ಯಾದ್ಯಂತ ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ : ಯಲ್ಲೊ ಅಲರ್ಟ್‌

ಡಾ.ಬಿಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿ 70 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಬೌದ್ಧ ಮಹಾ ಸಮ್ಮೇಳನ ಗರ್ಜಿಸಿದ್ದು, ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ, ಬೌದ್ಧ ಚಿಂತನೆಗಳ ಪ್ರಸಾರಕ್ಕೆ ಒತ್ತು ನೀಡಿದ್ದಾರೆ.

ಸಮ್ಮೇಳನದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಹೆಚ್‌ಸಿ ಮಹದೇವಪ್ಪ ಸೇರಿದಂತೆ ಶಾಸಕರಾದ ಎಆರ್ ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ನರೇಂದ್ರಸ್ವಾಮಿ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್ ಎಂಎಲ್‌ಸಿ ಡಾ ಡಿ ತಿಮ್ಮಯ್ಯ, ಡಾ ಯತೀಂದ್ರ ಇತರ ಪ್ರಮುಖರು ಭಾಗಿಯಾಗಿದ್ದರು.

Tags:
error: Content is protected !!