Mysore
21
few clouds

Social Media

ಗುರುವಾರ, 20 ಆಗಸ್ಟ್ 2026
Light
Dark

ದಸರಾಗೂ ಮೊದಲೇ ಅಶೋಕ್‌ ಸ್ಥಾನಕ್ಕೆ ಸಂಚಕಾರ: ಸಚಿವ ಪ್ರಿಯಾಂಕ್‌ ಖರ್ಗೆ ಹೊಸ ಬಾಂಬ್‌

R Ashok steps down as Opposition Leader even before Dussehra

ಬೆಂಗಳೂರು: ದಸರಾಗೂ ಮೊದಲೇ ವಿಪಕ್ಷ ನಾಯಕ ಆರ್.‌ಅಶೋಕ್‌ ಸ್ಥಾನಕ್ಕೆ ಸಂಚಕಾರ ಬರಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೊಸ ಬಾಂಬ್‌ ಸಿಡಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತೀವ್ರ ಚರ್ಚೆಯಲ್ಲಿದ್ದು, ಕಾಂಗ್ರೆಸ್‌ ಶಾಸಕರು ದಿನದಿಂದ ದಿನಕ್ಕೆ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಈ ಮಧ್ಯೆ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್‌ ಅವರು, ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಆರ್.‌ಅಶೋಕ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ ಅವರು, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಹಾಗೂ ವಿಪಕ್ಷ ನಾಯಕ ಬದಲಾವಣೆ ಚರ್ಚೆಗಳು ನಡೆಯುತ್ತಿವೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಕ್ಷಿಪ್ರ ಕ್ರಾಂತಿ ಕಾಂಗ್ರೆಸ್‌ನಲ್ಲಿ ಆಗಲ್ಲ, ಬಿಜೆಪಿಯಲ್ಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ಆಂತರಿಕ ಕಲಹವೇ ಆರ್‌.ಅಶೋಕ್‌ ಅವರ ದೆಹಲಿ ಭೇಟಿಗೆ ಕಾರಣವಾಗಿದೆ. ದಸರಾಗೂ ಮೊದಲೇ ವಿಪಕ್ಷ ನಾಯಕ ಸ್ಥಾನ ಬದಲಾಗುತ್ತದೆ. ಅದೇ ಕಾರಣಕ್ಕೂ ಅವರು ದೆಹಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Tags:
error: Content is protected !!