ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ಕೆಲವು ಹೊಸ ಸಂಪ್ರದಾಯಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುನ್ನುಡಿ ಬರೆದಿದ್ದಾರೆ. ಶಿವಕುಮಾರ್ ಅವರಿಗೆ ಅವರು ಮುಖ್ಯಮಂತ್ರಿಯಾದ ನಂತರ ಇದು ಮೊದಲ ದಸರಾ. ಮೈಸೂರಿನಲ್ಲಿ ಶನಿವಾರ ಅವರು ದಸರಾ ಉತ್ಸವದ ಸಿದ್ಧತೆಗಳನ್ನು ಕುರಿತು ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿ ಕೆಲವು ಸೂಚನೆಗಳನ್ನೂ ನೀಡಿದ್ದಾರೆ. ರಾಜಕೀಯಕ್ಕೆ ಅವಕಾಶವಿಲ್ಲದಂತೆ ದಸರಾ ನಡೆಸಬೇಕು, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕೆಂಬ ಅವರ ಆಶಯ ಸ್ವಾಗತಾರ್ಹವಾದುದು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮತ್ತೊಂದು ಸೂಚನೆ ಗಮನಾರ್ಹವಾದುದು ಹಾಗೂ ಶ್ಲಾಘನೀಯವಾದದ್ದು ಕೂಡ. ಮೈಸೂರು ದಸರಾ ಸಂದರ್ಭದಲ್ಲಿ ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕೆಂದು ಅವರು ತಾಕೀತು ಮಾಡಿರುವುದು ಪ್ರಶಂಸನೀಯವಾದ ನಡೆ. ಅಧಿಕಾರಿ ಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಫ್ಲೆಕ್ಸ್ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಮೈಸೂರು ನಗರಕ್ಕೆ ಸ್ವಲ್ಪವಾದರೂ ನಿರಾಳ ಎನಿಸುತ್ತದೆ. ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯ ಕಾಪಾಡಲು ಇದು ನೆರವಾಗುತ್ತದೆ.
ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಏಕತಾನತೆ ಯನ್ನು ಹೋಗಲಾಡಿಸಲು ಈ ಬಾರಿ ಕ್ರಮ ಕೈಗೊಂಡಿರುವುದು ಸೂಕ್ತಎನಿಸಿದೆ. ಹೊರರಾಜ್ಯಗಳ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳಿಗೂ ಈ ಬಾರಿ ಅವಕಾಶ ಕಲ್ಪಿಸಿರುವುದು ಮೆಚ್ಚುವಂಥದ್ದು. ವಿದೇಶ ರಾಯಭಾರಿಗಳಿಗೆ ಆಹ್ವಾನ ನೀಡಿರುವುದು ಮೈಸೂರು ದಸರಾ ಉತ್ಸವವನ್ನು ಹೊರ ದೇಶಗಳಲ್ಲಿ ಪ್ರಚಾರ ಮಾಡಲು ಮತ್ತಷ್ಟು ನೆರವಾಗುತ್ತದೆ. ಈ ಬಾರಿ ವಿಭಾಗವಾರು ಅತ್ಯುತ್ತಮ ಸ್ತಬ್ಧಚಿತ್ರಗಳು ಇರಲಿವೆ. ಕಲಾತಂಡಗಳನ್ನು ಅದೇ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತಿದೆ. ೩೧ ಜಿಗಳ ಬದಲಿಗೆ ಹದಿನೈದು ಜಿಲ್ಲೆಗಳ ಸ್ತಬ್ಧಚಿತ್ರಗಳಷ್ಟೇ ಇರಲಿದ್ದು, ಈ ಬಾರಿ ತಮಿಳುನಾಡು,ಕೇರಳ,ಆಂಧ್ರಪ್ರ ದೇಶ, ತೆಲಂಗಾಣ ರಾಜ್ಯಗಳ ಸ್ತಬ್ಧ ಚಿತ್ರಗಳು ಭಾಗವಹಿಸುವಂತೆ ಮಾಡುವ ಮೂಲಕ ಕರ್ನಾಟಕದಲ್ಲಿ ನೆಲೆಸಿರುವ ಆಯಾ ರಾಜ್ಯಗಳ ಜನರಿಗೆ ಕಣ್ತುಂಬಿಕೊಳ್ಳುವಂತೆ ಮಾಡಲಾಗುತ್ತಿದೆ.
ಭೂಸೇನೆ, ವಾಯುಪಡೆ, ನೌಕಾಪಡೆಗಳು ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಥಸಂಚಲನ ನಡೆಸುವ ಜತೆಗೆ,ತಮ್ಮ ಸಾಧನೆಗಳನ್ನು ಬಿಂಬಿಸು ವಂತಹ ಸ್ತಬ್ಧಚಿತ್ರಗಳನ್ನೂ ಪ್ರದರ್ಶಿಸಲಿವೆ. ಇದು ಜಂಬೂಸವಾರಿಗೆ ಹೊಸ ಮೆರುಗು ನೀಡಲಿದೆ. ಅರಮನೆ ಒಳಗೆ ಗಣ್ಯರ ಸಾಲಿನಲ್ಲಿ ಕುಳಿತು ವೀಕ್ಷಣೆ ಮಾಡುತ್ತಿದ್ದ ಸ್ಯಾಂಡಲ್‌ವುಡ್ ನಟ-ನಟಿಯರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಕರ್ನಾಟಕ ಚಲನಚಿತ್ರರಂಗ ಬೆಳೆದು ಬಂದ ಹಾದಿಯ ಬಗ್ಗೆ ಸ್ತಬ್ದಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಗಮನಾರ್ಹವಾಗಿದೆ.
ದಸರೆಯ ಸಂಪೂರ್ಣ ಜವಾಬ್ದಾರಿಯನ್ನು ಮೈಸೂರು ಜಿ ಉಸ್ತುವಾರಿ ಸಚಿವರು ಹೊತ್ತುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮೈಸೂರು ಜಿ ಉಸ್ತುವಾರಿ ಸಚಿವರೊಬ್ಬರಿಗೇ ಒತ್ತಡ ಹೆಚ್ಚಾಗುವುದನ್ನು ತಡೆಯಲಾಗಿದೆ. ಪ್ರತಿದಿನ ಇಬ್ಬರು ಸಚಿವರಂತೆ ೨೨ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೆರವಾಗಲು ನಿಯೋಜಿಸಲಾಗಿದೆ. ಇದು ಉತ್ತಮ ನಿರ್ಧಾರ. ದಸರೆಯ ಸಂದರ್ಭದಲ್ಲಿ ಏನಾದರೂ ಲೋಪವಾದರೂ ತಕ್ಷಣ ಸರಿಪಡಿಸಲು ಇದು ಸಹಾಯವಾಗಲಿದೆ.
” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮತ್ತೊಂದು ಸೂಚನೆ ಗಮನಾರ್ಹವಾದುದು ಹಾಗೂ ಶ್ಲಾಘನೀಯವಾದದ್ದು ಕೂಡ. ಮೈಸೂರು ದಸರಾ ಸಂದರ್ಭದಲ್ಲಿ ನಗರದಲ್ಲಿ ಎಲ್ಲಿಯೂ ಖಾಸಗಿ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೋ ಸೇರಿದಂತೆ ಯಾವ ಫೋಟೋಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕೆಂದು ಅವರು ತಾಕೀತು ಮಾಡಿರುವುದು ಪ್ರಶಂಸನೀಯವಾದ ನಡೆ. ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಫ್ಲೆಕ್ಸ್ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಮೈಸೂರು ನಗರಕ್ಕೆ ಸ್ವಲ್ಪವಾ ದರೂ ನಿರಾಳ ಎನಿಸುತ್ತದೆ. ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯ ಕಾಪಾಡಲು ಇದು ನೆರವಾಗುತ್ತದೆ.”




