Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ಏಕದಿನ ವಿಶ್ವಕಪ್‌: ಬಾಂಗ್ಲಾ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸೀಸ್‌

ಪುಣೆ : ಮಿಚೆಲ್‌ ಮಾರ್ಷ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ಇಲ್ಲಿನ ಎಂಸಿಎ (ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌) ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ನ 43ನೇ ಪಂದ್ಯದಲ್ಲಿ ಬಾಂಗ್ಲಾ ನೀಡಿದ 307ರನ್‌ಗಳ ಬೃಹತ್‌ ಮೊತ್ತ ಬೆನ್ನಟ್ಟಿದ ಆಸೀಸ್‌ 44.2 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಈ ಸಾಧನೆ ಮಾಡಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶಕ್ಕೆ ಮಂದಗತಿಯ ಆರಂಭ ದೊರೆಯಿತು. ಮದ್ಯಮ ಕ್ರಮಾಂಕ ಬ್ಯಾಟರ್‌ ತೌಹಿದ್ ಹೃದಾಯ್ (74) ಸಿಡಿಸಿದ ಅರ್ಧ ಶತಕ ತಂಡಕ್ಕೆ ಚೇತರಿಕೆ ನೀಡಿತು. ಉಳಿದಂತೆ ತಂಝೀದ್ ಹಸನ್ (36) ಹಾಗೂ ಲಿಟನ್ ದಾಸ್ (36), ನಜ್ಮುಲ್ ಹುಸೈನ್ ಶಾಂಟೊ (45) ಹಾಗೂ ಮಹ್ಮದುಲ್ಲಾ (32) ಅವರ ಸಮಯೋಚಿತ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡದೆದುರು 8 ವಿಕೆಟ್‌ ಕಳೆದುಕೊಂಡು 306 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತು.

ಆರಂಭದಿಂದಲೂ ನಿರೀಕ್ಷಿತ ಆಟ ಮೂಡಿ ಬರದಿದ್ದರು ಸಂಘಟಿತ ಬ್ಯಾಟಿಂಗ್‌ ಮೂಲಕ ಬಲಿಷ್ಠ ಆಸ್ಟ್ರೇಲಿಯಾಕ್ಕೆ 307 ರನ್‌ಗಳ ಗುರಿ ನೀಡಿತು. ಆಸ್ಟ್ರೇಲಿಯಾ ಪರ ಸೀನ್‌ ಆಬಾಟ್‌ ಮತ್ತು ಆಡಂ ಜಂಪಾ ತಲಾ 2 ವಿಕೆಟ್‌ ಪಡೆದರು.

ಬಾಂಗ್ಲಾ ನೀಡಿದ ಗುರಿ ಬೆನ್ನಟ್ಟಿದ ಆಸೀಸ್‌ಗೆ ಆರಂಭಿಕ ಆಘಾತ ಎದುರಾಯಿತು. ಟ್ರಾವಿಸ್‌ ಹೆಡ್‌ ಕೇವಲ 10 ರನ್‌ಗಳಿಸಿ ಔಟಾದರು. ತಮ್ಮ ಫಾರ್ಮ್‌ ಮುಂದುವರೆಸಿರುವ ವಾರ್ನರ್‌ (53) ಅರ್ಧ ಶತಕ ಸಿಡಿಸಿ ನಿರ್ಗಮಿಸಿದರು. ನಂತರ ಜೋಡಿಯಾದ ಮಿಚೆಲ್‌ ಮಾರ್ಷ್‌ ಹಾಗೂ ಸ್ಟೀವನ್‌ ಸ್ಮಿತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಾರ್ಷ್‌ 132 ಎಸೆತಗಳಲ್ಲಿ 19 ಬೌಂಡಿರಿ ಹಾಗೂ 9 ಸಿಕ್ಸರ್‌ ನೆರವಿನಿಂದ ಬರೋಬ್ಬರಿ 177ರನ್‌ ಚಚ್ಚಿದರೇ, ಇವರಿಗೆ ಸಾಥ್‌ ನೀಡಿದ ಸ್ಮಿತ್‌ 64 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 63 ರನ್‌ಗಳಿಸಿ ಔಟಾಗದೇ ಉಳಿದರು.

ಪಂದ್ಯ ಶ್ರೇಷ್ಠ : ಮಿಚೆಲ್‌ ಮಾರ್ಷ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!