ಆಂದೋಲನ ವಿ4 :18 ಭಾನುವಾರ 2022

ಮೌಲ್ಯ ಕಳೆದುಕೊಳ್ಳುತ್ತಿರುವ ಬ್ರಿಟಿಷ್ ಕರೆನ್ಸಿ!

ಇಷ್ಟು ದಿನ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿತ್ತು. ಈಗ ಬ್ರಿಟಿಷ್ ಕರೆನ್ಸಿಯಾದ ಸ್ಟರ್ಲಿಂಗ್ ಪೌಂಡ್ ಕೂಡ ಡಾಲರ್ ವಿರುದ್ಧ ಮೌಲ್ಯ ಕಳೆದುಕೊಳ್ಳುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ, ಡಾಲರ್ ವಿರುದ್ಧ ಸ್ಟರ್ಲಿಂಗ್ ಪೌಂಡ್ ಮೌಲ್ಯವು ನಾಲ್ಕು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚಿಲ್ಲರೆ ಮಾರಾಟದಲ್ಲಿ ಆಶ್ಚರ್ಯಕರವಾಗಿ ತೀವ್ರ ಕುಸಿತ ದಾಖಲಿಸಿರುವುದು ಮತ್ತು ಯುಕೆ ಆರ್ಥಿಕತೆ ಹಿಂಜರಿತದ ಕಪಿಮುಷ್ಟಿಗೆ ಸಿಕ್ಕಿ ಬೀಳುವ ಭಯದ ಹಿನ್ನೆಲೆಯಲ್ಲಿ ಸ್ಟರ್ಲಿಂಗ್ ಪೌಂಡ್ ಮೌಲ್ಯ ತ್ವರಿತವಾಗಿ ಕುಸಿಯುತ್ತಿದೆ. ಪ್ರಸ್ತುತ ವಹಿವಾಟಿನಲ್ಲಿ ಸ್ಟರ್ಲಿಂಗ್ ಪ್ರತಿ ಡಾಲರ್‌ಗೆ ೧.೧೩೫೩ ರ ಮಟ್ಟಕ್ಕೆ ಇಳಿದಿದೆ. ಇದು ೧೯೮೫ ರಲ್ಲಿ ಪ್ರತಿ ಡಾಲರ್‌ಗೆ ಇದ್ದ ೧.೧೪ರ ಮಟ್ಟಕ್ಕಿಂತ ಕ್ಕಿಂತ ಕಡಿಮೆ. ಸ್ಟರ್ಲಿಂಗ್ ಪೌಂಡ್ ಕುಸಿತಕ್ಕೆ ಯುಕೆ ಆರ್ಥಿಕತೆಯ ಹಿನ್ನಡೆಯಷ್ಟೇ ಅಲ್ಲ, ಅಮೆರಿಕದ ಆರ್ಥಿಕ ಚಟುವಟಿಕೆಗಳೂ ಕಾರಣ. ಬಡ್ಡಿ ದರ ಏರಿಕೆ ಮತ್ತು ರೇಗನ್ ಆಡಳಿತದ ತೆರಿಗೆ ಕಡಿತ ಜಾರಿಯಿಂದಾಗಿ ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ತೀವ್ರವಾಗಿ ಏರುತ್ತಿದೆ. ಹೀಗಾಗಿ ರೂಪಾಯಿ ಸೇರಿದಂತೆ ಉಳಿದೆಲ್ಲ ಕರೆನ್ಸಿಗಳ ಮೌಲ್ಯ ಕುಸಿಯುತ್ತಿದೆ.


ಐನ್‌ಸ್ಟೀನ್ ಸಿದ್ಧಾಂತ ಸಾರ್ವಕಾಲಿಕ!

ಮನುಷ್ಯರು, ಪ್ರಾಣಿಗಳು ತಾರತಮ್ಯ ಮಾಡಬಹುದು. ಆದರೆ, ಗುರುತ್ವಾಕರ್ಷಣೆ ತಾರತಮ್ಯ ಮಾಡುವುದಿಲ್ಲ ಎಂಬುದು ಮತ್ತೆ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ನಡೆದ ಕಕ್ಷೆಯಲ್ಲಿನ ಪ್ರಯೋಗವು ಹಿಂದಿನ ಪ್ರಯತ್ನಗಳಿಗಿಂತ ನೂರು ಪಟ್ಟು ಹೆಚ್ಚು ನಿಖರತೆಯೊಂದಿಗೆ ಗುರುತ್ವಾಕರ್ಷಣೆಯ ಪ್ರಭಾವದ ಅಡಿಯಲ್ಲಿ ಎಲ್ಲವೂ ಒಂದೇ ರೀತಿಯಲ್ಲಿ ಬೀಳುತ್ತದೆ ಎಂದು ದೃಢಪಡಿಸಿದೆ. ಈ ಸಂಶೋಧನೆಯು ಐನ್‌ಸ್ಟೀನ್‌ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಪ್ರಮುಖ ಸಿದ್ಧಾಂತವಾದ ಸಮಾನತೆಯ ತತ್ವದ ಇನ್ನೂ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ಈ ತತ್ವವು ಸಾವಿರ ಟ್ರಿಲಿಯನ್ನಲ್ಲಿ ಸುಮಾರು ಒಂದು ಭಾಗವನ್ನು ಹೊಂದಿದೆ ಎಂದು ಸಂಶೋಧಕರು ಸೆಪ್ಟೆಂಬರ್ ೧೪ರಂದು ಜ್ಚಿಚ್ಝ ್ಕಛಿಜಿಛಿಡಿ ಔಛಿಠಿಠಿಛ್ಟಿನಲ್ಲಿ ವರದಿ ಮಾಡಿದ್ದಾರೆ. ಗುರುತ್ವಾಕರ್ಷಣೆಯು ಎಲ್ಲಾ ವಸ್ತುಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯು ಆಶ್ಚರ್ಯಕರವಾಗಿ ಕಾಣಿಸುವುದಿಲ್ಲ. ಆದರೆ ಸಾಮಾನ್ಯ ಸಾಪೇಕ್ಷತೆ, ಗುರುತ್ವಾಕರ್ಷಣೆಯ ಮೂಲ ಸಿದ್ಧಾಂತ, ಕಣ ಭೌತಶಾಸ್ತ್ರದ ಪ್ರಮಾಣಿತ ಮಾದರಿಯೊಂದಿಗೆ ಎಲ್ಲಾ ಮೂಲಭೂತ ಕಣಗಳನ್ನು ವಿವರಿಸುವ ಸೈದ್ಧಾಂತಿಕ ಚೌಕಟ್ಟನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು.


ಗೂಗಲ್ ಕೂಡ ತಪ್ಪು ಮಾಡುತ್ತೆ!

ನಾವು ಮಾಡಿದ್ದು ಸರಿಯೋ ತಪ್ಪೋ ಎಂಬುದನ್ನು ದೃಢಪಡಿಸಿಕೊಳ್ಳಲು ಗೂಗಲ್ ಮೊರೆ ಹೋಗುತ್ತೇವೆ. ಆದರೆ ಗೂಗಲ್ ಕೂಡ ಒಮ್ಮೊಮ್ಮೆ ತಪ್ಪು ಮಾಡುತ್ತೆ ಅನ್ನೋದನ್ನು ಮರೆತಿರುತ್ತೇವೆ. ಗೂಗಲ್ ಕೂಡ ಇಂತಹ ತಪ್ಪನ್ನು ಮಾಡಿದೆ. ಸೈಬರ್ ಸೆಕ್ಯುರಿಟಿ ಹ್ಯಾಕರ್ ಒಬ್ಬರ ಖಾತೆಗೆ ಗೂಗಲ್ ವಿನಾಕಾರಣ ೨೪೯,೯೯೯ ಡಾಲರ್ (೨ ಕೋಟಿ ರೂಪಾಯಿ) ಪಾವತಿ ಮಾಡಿದೆ. ಯುಗಾ ಲ್ಯಾಬ್ಸ್‌ನ ಹ್ಯಾಕರ್ ಸ್ಯಾಮ್ ಕರಿ ಅವರು ಅನಿರೀಕ್ಷಿತವಾಗಿ ಹಣ ಪಾವತಿಯಾದ ಸಂಗತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗೂಗಲ್ ತನ್ನ ಬ್ಯಾಂಕ್ ಖಾತೆಗೆ ವಿವರಣೆಯಿಲ್ಲದೆ ೨೪೯,೯೯೯ ಡಾಲರ್ ಕಳುಹಿಸಿದೆ ಮತ್ತು ಮೂರು ವಾರಗಳ ಸಂಪರ್ಕ ಪ್ರಯತ್ನಗಳ ನಂತರ ಕಂಪೆನಿಯಿಂದ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ. ಕರಿ ಅವರು ಕೆಲವೊಮ್ಮೆ ಗೂಗಲ್‌ನಂತಹ ಟೆಕ್ ಕಂಪೆನಿಗಳಲ್ಲಿನ ಲೋಪಗಳನ್ನು ಕಂಡು ಹಿಡಿಯುವ ಕೆಲಸ (ಎಥಿಕಲ್ ಹ್ಯಾಕರ್) ಮಾಡುತ್ತಾರೆ. ಆದರೆ ಇತ್ತೀಚಿನ ಯೋಜನೆಗಳು ಮತ್ತು ಈ ನಿಗೂಢ ಪಾವತಿಯ ನಡುವೆ ಯಾವುದೇ ಲಿಂಕ್ ಅನ್ನು ಕಂಡುಹಿಡಿ–– ಯಲಾಗಲಿಲ್ಲ ಎಂದು ಕರಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಹಣ ಪಾವತಿಯು ‘ಮಾನವ ದೋಷದ ಫಲಿತಾಂಶ’ವಾಗಿದೆ ಎಂದಿದೆ.


ನೆಹರೂ ಭೇಟಿಯ ನೆನಪಿನ ಮಂಟಪ

ಕೊಡಗು ಜಿಲ್ಲೆಗೆ ೧೯೫೭ರಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಭೇಟಿ ನೀಡಿದ್ದರು. ಆ ಸ್ಥಳದಲ್ಲಿ ಕುಳಿತು ಮಡಿಕೇರಿಯ ಪ್ರಕೃತಿಯ ಸೊಬಗನ್ನು ಬಣ್ಣಿಸಿದ್ದರು. ಅವರ ಭೇಟಿಯ ನೆನಪಿಗೆ ಮಂಟಪ ನಿರ್ಮಿಸಿ, ನೆಹರು ಮಂಟಪ ಎಂದು ಹೆಸರಿಡಲಾಗಿತ್ತು. ಮಡಿಕೇರಿ ಆಕಾಶವಾಣಿ ಕೇಂದ್ರ ಕಚೇರಿಯ ಬಳಿ ಇರುವ ನೆಹರು ಮಂಟಪ ನವೀಕರಣಗೊಂಡಿದ್ದರೂ ಪ್ರವಾಸಿಗರಿಂದ ದೂರವೇ ಉಳಿದಿದೆ. ಇಂತಹದೊಂದು ಅಪರೂಪದ ಸ್ಥಳ ಇದೆ ಎಂಬುದೇ ಪ್ರವಾಸಿಗರಿಗೆ ತಿಳಿದಿಲ್ಲ. ರಾಜಾಸೀಟ್ ಉದ್ಯಾನ ರೀತಿಯಲ್ಲೇ ಬೆಟ್ಟದ ತುದಿಯಲ್ಲಿರುವ ನೆಹರು ಮಂಟಪದಲ್ಲಿ ನಿಂತು ಅಕರ್ಷಕ ಬೆಟ್ಟದ ಸಾಲು ಸೇರಿದಂತೆ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಈ ಗುಡ್ಡದಿಂದ ನಿಂತು ನೋಡಿದರೆ ಮಡಿಕೇರಿ ಪಟ್ಟಣದ ವಿಹಂಗಮ ನೋಟ ಕೂಡ ಕಣ್ತುಂಬಿಕೊಳ್ಳಬಹುದು. ರಾಜಾಸೀಟ್‌ಗಿಂತ ಎತ್ತರದಲ್ಲಿರುವ ನೆಹರು ಮಂಟಪ ಅಲ್ಲಿಗಿಂತಲೂ ಅಧಿಕ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಹಕಾರಿಯಾಗಿದೆ. ಮಡಿಕೇರಿ ಪಟ್ಟಣದಲ್ಲೇ ಈ ಪ್ರವಾಸಿ ತಾಣ ಇರುವುದರಿಂದ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ