ಅಮೇರಿಕಾದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಉಡಾವಣೆಯಾಗಿದೆ.
ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿರುವ ಡ್ರ್ಯಾಗನ್ ಗಗನಯಾತ್ರಿಗಳನ್ನು ಹೊತ್ತೊಯ್ದಿದೆ. ಈ ನೌಕೆ ನಾಳೆ ಸಂಜೆ 4.30ಕ್ಕೆ ಐಎಎಸ್‌ನೊಂದಿಗೆ ಡಾಕ್ ಆಗುತ್ತದೆ. ಜೈಹಿಂದ್, ಜೈ ಭಾರತ್ ಎಂದು ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಸಂದೇಶ ರವಾನಿಸಿದ್ದಾರೆ.
ನನ್ನ ಈ ಗಗನಯಾನದಲ್ಲಿ ಭಾರತೀಯರ ಪಾತ್ರ ಇದೆ. ನಾನು ಒಬ್ಬಂಟಿಯಲ್ಲ. ಭಾರತದ ತ್ರಿವರ್ಣ ಧ್ವಜ ನನ್ನ ಹೆಗಲ ಮೇಲಿದೆ. 41 ವರ್ಷದ ಬಳಿಕ ನಾವು ಬಾಹ್ಯಾಕಾಶ ತಲುಪಿದ್ದೇವೆ. ಎಲ್ಲಾ ಭಾರತೀಯರಿಗೂ ಧನ್ಯವಾದಗಳು. ಜೈ ಹಿಂದೆ, ಜೈ ಭಾರತ್ ಎಂದು ಬಾಹ್ಯಾಕಾಶದಿಂದ ಸಂದೇಶ ರವಾನಿಸಿದ್ದಾರೆ.
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಇಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದು, ಆಕ್ಸಿಯಮ್-4 ಮಿಷನ್ ಉಡಾವಣೆಯಾಗಿದೆ. ಭಾರತೀಯ ಶುಭಾಂಶು ಶುಕ್ಲಾ ಇತರೆ ಮೂವರಿಂದ ಅಂತರಿಕ್ಷ ಪ್ರವಾಸ ಕೈಗೊಳ್ಳಲಾಗಿದೆ.