ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದಲೈಲಾಮಾ ಅವರಿಗೆ 90ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಅವರು ಪ್ರೀತಿ, ಕರುಣೆ, ತಾಳ್ಮೆ ಹಾಗೂ ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ.
ದಲೈಲಾಮಾ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದ್ದು, ಅವರ ಸಂದೇಶವು ಎಲ್ಲಾ ನಂಬಿಕೆಗಳಲ್ಲಿ ಗೌರವವನ್ನು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪೂಜ್ಯ ದಲೈಲಾಮಾ ಅವರು 90ನೇ ಹುಟ್ಟುಹಬ್ಬದಂದು ನಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸುವಲ್ಲಿ ನಾನು 1.4 ಶತಕೋಟಿ ಭಾರತೀಯರೊಂದಿಗೆ ಸೇರುತ್ತೇನೆ. ಅವರು ಪ್ರೀತಿ, ಕರುಣೆ, ತಾಳ್ಮೆ ಮತ್ತು ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ.
ಅವರ ಸಂದೇಶವು ಎಲ್ಲಾ ನಂಬಿಕೆಗಳಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಪ್ರೇರೇಪಿಸಿದೆ. ಅವರ ನಿರಂತರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.