Mysore
25
scattered clouds

Social Media

ಸೋಮವಾರ, 27 ಏಪ್ರಿಲ 2026
Light
Dark

IPL 2026 | ಕಂಗೆಟ್ಟ ಕ್ಯಾಪಿಟಲ್ಸ್‌ ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸುಲಭ ಜಯ

ನವದೆಹಲಿ : ಹ್ಯಾಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.‌

ಇಲ್ಲಿನ ಅರುಣ್‌ ಜೇಟ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 16.3 ಓವರ್‌ನಲ್ಲಿ 75 ರನ್‌ಗಳಿಸಿ ಆಲೌಟ್‌ ಆಯಿತು. 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 6.3 ಓವರ್‌ನಲ್ಲಿಯೇ 77 ರನ್‌ಗಳಿಸುವ ಮೂಲಕ ಗೆಲುವು ಸಾಧಿಸಿದೆ

ಡೆಲ್ಲಿ ನೀಡಿದ್ದ 76 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭದಲ್ಲಿ ಜೋಸೆಫ್‌ ಬೆಥೆಲ್‌ (20) ಅವರ ವಿಕೆಟ್‌ ಕಳೆದುಕೊಂಡರೂ, ದೇವದತ್‌ ಪಡಿಕ್ಕಲ್‌ (34) ಮತ್ತು ವಿರಾಟ್‌ ಕೋಹ್ಲಿ (23) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟ್‌ ಮಾಡಿದ ಡೆಲ್ಲಿ, 16.3 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 75 ರನ್‌ ಗಳಿಸಿತು. ಪಂದ್ಯದ ಆರಂಭದ ಕೇವಲ 3.5 ಓವರ್‌ನಲ್ಲೇ ಡೆಲ್ಲಿ 9 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಡೆಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್‌ಗೆ ಅತಿಹೆಚ್ಚು ವಿಕೆಟ್‌ ಕಳೆದುಕೊಂಡ ತಂಡ ಎಂಬ ಅಪಖ್ಯಾತಿಗೆ ಗುರಿಯಾಯಿತು.

Tags:
error: Content is protected !!