Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಇರಾನ್‌-ಇಸ್ರೇಲ್‌ ಯುದ್ಧ : ಕದನ ವಿರಾಮ ಘೋಷಿಸಿದ ಟ್ರಂಪ್‌ !

ವಾಷಿಂಗ್ಟನ್‌ : ಇರಾನ್‌ ಹಾಗೂ ಇಸ್ರೇಲ್‌ ಸೋಮವಾರ ಮಧ್ಯರಾತ್ರಿಯವರೆಗೂ ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಲೇ ಇತ್ತು. ಈ ನಡುವೇ ಎರಡು ದೇಶಗಳಿಗೂ ಮಾಹಿತಿ ಇಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಕದನ ವಿರಾಮ ಘೋಷಿಸಿದ್ದಾರೆ.

ಇರಾನ್‌ ಹಾಗೂ ಇಸ್ರೇಲ್‌ ದೇಶಗಳು ನನ್ನ ಬಳಿ ಬಂದು ಶಾಂತಿ ಕೋರಿದರು. ಹೀಗಾಗಿ ಕದಮ ವಿರಾಮಕ್ಕೆ ಇದು ಸರಿಯಾದ ಸಮಯ ಎಂದು ಭಾವಿಸಿ ಉಭಯ ದೇಶಗಳಿಗೆ ಶಾಂತಿ ಸಂದೇಶ ನೀಡಿದ್ದೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಟ್ರಂಪ್‌ ಅವರ ಈ ಘೋಷಣೆ ಜಗತ್ತನ್ನು ಅಚ್ಚರಿಗೊಳಿಸಿದೆ.

ಉಭಯ ರಾಷ್ಟ್ರಗಳು ಭವಿಷ್ಯದಲ್ಲಿ ಪ್ರೀತಿ, ಶಾಂತಿಯೊಂದಿಗೆ ಸಾಕಷ್ಟು ಅವಕಾಶ ಗಳಿಸಲಿ. ಹಲವಾರು ಭರವಸೆ ಕೂಡಿರಲಿ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್‌ ಅವರ ಈ ಅಚ್ಚರಿ ಹೇಳಿಕೆಯಿಂದ ಇಸ್ರೇಲ್‌ ಹೊರಬರಲು ಕೆಲ ಸಮಯ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಘೋಷಣೆಗೂ ಮುನ್ನ ಟ್ರಂಪ್‌ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮೂಲಕ ಸಮಾಲೋಚನೆ ನಡೆಸಿದ್ದಾರೆ ಬಳಿಕವೇ ಈ ಘೋಷಣೆ ಮಾಡಿದ್ದಾರೆ. ಆದರೆ, ಟ್ರಂಪ್‌ ಅವರ ಘೋಷಣೆಯನ್ನು ಅರಗಿಸಿಕೊಳ್ಳಲು ಇರಾನ್‌ ಕೂಡ ಸಾಕಷ್ಟು ಸಮಯ ತೆಗೆದುಕೊಂಡಿತು ಎಂದು ಮಾದ್ಯಮಗಳು ವರದಿ ಮಾಡಿವೆ.

ಈ ಮೂಲಕ ಉಭಯ ದೇಶಗಳ ನಡುವಿನ ಕದನ ವಿರಾಮದ ಶ್ರೇಯಸ್ಸನ್ನು ಟ್ರಂಪ್‌ ಪಡೆದುಕೊಂಡಿದ್ದಾರೆ.

Tags:
error: Content is protected !!