ಹಾಂಗ್ ಕಾಂಗ್: ಚೀನಾದ ತೈವಾನ್‌ನಲ್ಲಿ ಬೀಸುತ್ತಿರುವ ರಾಗಸಾ ಚಂಡಮಾರುತವು ಈವರೆಗೆ ಕನಿಷ್ಠ 17 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ನಿನ್ನೆಯಷ್ಟೇ ಚೀನಾಕ್ಕೆ ಅಪ್ಪಳಿಸಿದ ಚಂಡಮಾರುತವು ಭಾರೀ ವಿನಾಶವನ್ನು ಉಂಟುಮಾಡಿದೆ. ಹಾಂಗ್ ಕಾಂಗ್ ವಾಯು ವಿಹಾದ ಮೇಲೆ ದೀಪಸ್ತಂಭಗಳಿಗಿಂಯ ಎತ್ತರದ ಅಲೆಗಳು ಬೀಸಿದ ಪರಿಣಾಮ ತೈವಾನ್ ಮತ್ತು ಫಿಲಿಫೈನ್ಸ್‌ನಲ್ಲಿ ಮಾರಕ ಹಾನಿ ಉಂಟಾಗಿದೆ.
ಇದನ್ನು ಓದಿ : ಚೀನಾದಲ್ಲಿ 7.2 ರಷ್ಟು ಭೂಕಂಪ: ರಾಷ್ಟ್ರ ರಾಜಧಾನಿಯಲ್ಲೂ ಕಂಪನ ಅನುಭವ
ಪ್ರವಾಹದ ತೀವ್ರತೆಗೆ ರಸ್ತೆಗಳು ಕೊಚ್ಚಿ ಹೋಗಿದ್ದು, ನೂರಾರು ವಾಹನಗಳು ಕೂಡ ನೀರುಪಾಲಾಗಿವೆ. ಈವರೆಗೆ ಪ್ರವಾಹಕ್ಕೆ ಸಿಲುಕಿ 17 ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ದಕ್ಷಿಣ ಚೀನಾದ ಆರ್ಥಿಕ ಶಕ್ತಿ ಕೇಂದ್ರವಾದ ಗುವಾಂಗ್ ಡಾಂಗ್ ಪ್ರಾಂತ್ಯದಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





