ಮೈಸೂರು: ಏಷ್ಯಾದ ಅತಿದೊಡ್ಡ ಹಾರ್ಸ್ ಶೋ ರಾಯಲ್ಟಿ ಹಾರ್ಸ್ ಶೋನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಪುತ್ರ ಸಾ.ರಾ.ಜಯಂತ್ ಸಾಕಿದ್ದ ಹಾರ್ಸ್‌ಗೆ ಪ್ರಥಮ ಸ್ಥಾನ ಲಭಿಸಿದೆ.
ಟೂ ಟೀತ್ ಹಾರ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೋಲೆಕ್ಸ್ ಎಂಬ 28 ತಿಂಗಳ ಕುದುರೆಗೆ ಪ್ರಥಮ ಸ್ಥಾನ ಲಭಿಸಿದ್ದು, ಒಂದು ಲಕ್ಷ ನಗದು ಬಹುಮಾನ ನೀಡಲಾಗಿದೆ.
ಬಹುಮಾನ ರೂಪದಲ್ಲಿ ಬಂದ ಒಂದು ಲಕ್ಷ ರೂಪಾಯಿ ಹಣವನ್ನು ಮೈಸೂರಿನಲ್ಲಿ ಕಾಮುಕನಿಂದ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ನೀಡಲು ನಿರ್ಧಾರ ಮಾಡಲಾಗಿದೆ.
ಬಹುಮಾನದ ಹಣವೆಲ್ಲವನ್ನು ಡಿಡಿ ಮೂಲಕ ನೀಡಲು ಮುಂದಾಗಿರುವ ಸಾ.ರಾ.ಜಯಂತ್ ನಿರ್ಧಾರಕ್ಕೆ ಸಾ.ರಾ.ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾ.ರಾ.ಜಯಂತ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.





