Mysore
32
scattered clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಓದುಗರ ಪತ್ರ: ಕೊರಿಯನ್ ಗೇಮ್ಸ್ ನಿಷೇಧಿಸಿ

dgp murder case

ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ ಡ್ರಾಮಾ ಕಲ್ಪನಾ ಲೋಕದಲ್ಲಿ ಬಂದಿಯಾಗುತ್ತಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರಿಯನ್ ವಿಷಯಗಳ ಬಳಕೆ ಕಳೆದ ಎರಡು ವರ್ಷಗಳಲ್ಲಿ ಶೇ.೩೦೦ ರಷ್ಟು ಹೆಚ್ಚಾಗಿದೆ. ಇದು ಕೇವಲ ಮನೋರಂಜನೆಯಾಗಿ ಉಳಿಯದೆ ಡಿಜಿಟಲ್ ಡ್ರಗ್ ಆಗಿ ಮಾರ್ಪಡುತ್ತಿದೆ. ಈ ಸರಣಿಗಳು ಮತ್ತು ಗೇಮ್‌ಗಳು ಹದಿಹರೆಯದವರಲ್ಲಿ ವಾಸ್ತವ ಪ್ರಜ್ಞೆಯನ್ನು ನಾಶಪಡಿಸಿ ಅವರನ್ನು ಒಂಟಿತನ ಮತ್ತು ಖಿನ್ನತೆಯ ಸುಳಿಗೆ ದೂಡುತ್ತಿವೆ. ಶೈಕ್ಷಣಿಕ ಪ್ರಗತಿಯ ಕುಸಿತ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ನಾಶಕ್ಕೆ ಇದು ನಾಂದಿಯಾಗುತ್ತಿದೆ.

ಸರ್ಕಾರವು ಇಂತಹ ಅಪಾಯಕಾರಿ ಗೇಮ್‌ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಮತ್ತು ಒಟಿಟಿ ವೇದಿಕೆಗಳಲ್ಲಿನ ವಿಷಯಗಳ ಮೇಲೆ ನಿಯಂತ್ರಣ ಹೇರಬೇಕು.

-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು 

Tags:
error: Content is protected !!