ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ ಗ್ರಾಮದ ಒಳ ಚರಂಡಿ ನೀರು ಬಿಡುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ಜಲಚರಗಳಿಗೂ ಮಾರಕವಾಗಿದೆ.
ಕೆರೆ ಸ್ವಚ್ಛವಾಗಿದ್ದಾಗ ದೇಶ-ವಿದೇಶಗಳ ನೂರಾರು ಜಾತಿಯ ಪಕ್ಷಿಗಗಳು ಪ್ರತಿವರ್ಷ ಈ ಕರೆಗೆ ಬಂದುಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಕರೆ ಕಲುಷಿತವಾಗಿರುವುದರಿಂದ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ.
ಕಲುಷಿತವಾಗಿರುವ ಕೆರೆಯ ನೀರನ್ನು ಸೇವಿಸಿದ ಹಸುಗಳು ಹಾಗೂ ಕುರಿಗಳು ಕಾಯಿಲೆಗೆ ತುತ್ತಾಗುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೂಡಲೇ ಬೇಸಿಗೆಯಲ್ಲಿ ಕೆರೆಯ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು ಹಾಗೂ ಒಳಚರಂಡಿ ನೀರು ಕೆರೆಗೆ ಸೇರುವುದನ್ನು ತಡೆಗಟ್ಟುವ ಮೂಲಕ ಜನ ಜೀವ ನಾಡಿಯಾಗಿರುವ ಜಪಮೂಲವನ್ನು ಉಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು





