Mysore
31
overcast clouds

Social Media

ಬುಧವಾರ, 06 ಮೇ 2026
Light
Dark

ಓದುಗರ ಪತ್ರ: ಖಾಲಿ ನಿವೇಶನದಲ್ಲಿರುವ ಕಸ ತೆರವುಗೊಳಿಸಿ

ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು ಕಸ ಸುರಿಯುತ್ತಿದ್ದಾರೆ, ಅಲ್ಲದೇ ನೆರೆ ಮನೆಯವರು ಹಸುಗಳನ್ನು ಕಟ್ಟಿದ್ದು, ಹುಲ್ಲು, ಸಗಣಿ ಹಾಕಿ ವಾತಾವರಣವನ್ನುಕಲುಷಿತಗೊಳಿಸುತ್ತಿದ್ದಾರೆ. ಈ ನಿವೇಶನದ ಮಾಲೀಕರು ನಿವೇಶನದ ಸುತ್ತ ಕಾಂಪೌಂಡ್ ಹಾಕಿ ಕಸ ಹಾಕುವುದನ್ನು ತಡೆಗಟ್ಟಬೇಕು.

ನಿವೇಶನದ ಮಾಲೀಕರು ನಿರ್ಲಕ್ಷ್ಯ ವಹಿಸಿದರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಖಾಲಿ ನಿವೇಶನಕ್ಕೆ ಕಾಂಪೌಂಡ್ ಹಾಕದೇ ನಿರ್ಲಕ್ಷ್ಯ ವಹಿಸಿರುವ ನಿವೇಶನದ ಮಾಲೀಕರಿಗೆ ದಂಡ ವಿಧಿಸಬೇಕು.

 -ಕೆ.ಗೋವಿಂದರಾಜು, ಶ್ರೀರಾಂಪುರ ೨ನೇ ಹಂತ, ಮೈಸೂರು

Tags:
error: Content is protected !!