ಮೈಸೂರು: ಪಿರಿಯಾಪಟ್ಟಣ ಸಮೀಪ ಶಾಲಾ ವಾಹನ ಪಲ್ಟಿಯಾಗಿ ಮಕ್ಕಳು ಗಾಯಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಲುವಾಂಬ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ವೈದ್ಯರು, ಗಾಯಗೊಂಡಿದ್ದ 11 ಮಕ್ಕಳಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಓರ್ವ ವಿದ್ಯಾರ್ಥಿಗೆ ಹೆಚ್ಚಿನ ಗಾಯವಾಗಿದ್ದು, ಉಳಿದ 10 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಶಾಲಾ ವಾಹನದ ಚಾಲಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ಇಂದು ಬೆಳಗ್ಗೆ 8:30ರ ವೇಳೆಯಲ್ಲಿ 11 ಮಕ್ಕಳ ಸಮೇತ ವಾಹನದಲ್ಲಿ ಬರುವ ವೇಳೆ ಘಟನೆ ಸಂಭವಿಸಿದೆ.
ಇದ್ದಕ್ಕಿದ್ದ ಹಾಗೆ ವಾಹನದ ಸ್ಟೇರಿಂಗ್ ನಿಯಂತ್ರಣಕ್ಕೆ ಸಿಗದ ಪರಿಣಾಮ ವಾಹನ ಹಳ್ಳಕ್ಕೆ ಬಿದ್ದಿದೆ. ಸದ್ಯ ಅಕ್ಕಪಕ್ಕದಲ್ಲೂ ವಾಹನಗಳು ಸಂಚರಿಸುತ್ತಿದ್ದವು. ಸ್ಥಳೀಯರು ಶೀಘ್ರವೇ ನೆರವಿಗೆ ಬಂದರು, ನನಗೆ ತಲೆಗೆ ಹಾಗೂ ಮೂಗಿನ ಭಾಗಕ್ಕೆ ಪೆಟ್ಟಾಗಿದೆ. ಉಳಿದಂತೆ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಮಕ್ಕಳು ಚಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಘಟನೆ ಬಗ್ಗೆ ವಿವರಿಸಿದರು.
ಅಪಘಾತದ ವಿಡಿಯೋ ನೋಡಿ:-