Mysore
24
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ ಬರೆದ ಬೆನ್ನಲ್ಲೇ 14 ಸೈಟ್‌ನ ಖಾತೆ ರದ್ದು ಮಾಡಿದ ಮುಡಾ

ಮೈಸೂರು: ಮುಡಾ ಹಗರಣದಲ್ಲಿ 14 ಬದಲಿ ನಿವೇಶನಗಳನ್ನು ಪಡೆದಿದ್ದ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು, ತಮ್ಮ 14 ಸೈಟ್‌ಗಳನ್ನು ವಾಪಸ್‌ ನೀಡುವುದಾಗಿ ಮುಡಾಗೆ ಪತ್ರ ಬರೆದಿದ್ದರು. ಇದನ್ನು ಮುಡಾ 24 ಗಂಟೆಯೊಳಗೆ ಸ್ವೀಕರಿಸಿದ್ದಲ್ಲದೇ ಪತ್ರವನ್ನು ಅಂಗೀಕರಿಸಿ ಇ.ಡಿ ನಿವೇಶನವನ್ನು ವಶಕ್ಕೆ ಪಡೆಯುವ ಮೊದಲೇ ಖಾತೆ ರದ್ದುಗೊಳಿಸಿದೆ.

ಮುಡಾ ಹಗರಣ ಇಡೀ ರಾಜ್ಯದಲ್ಲೇ ಕಳೆದ 3 ತಿಂಗಳಿನಿಂದ ಸದ್ದು ಮಾಡುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಲ್ಲದೇ, ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ನಿನ್ನೆ ಇ.ಡಿ.ಯಲ್ಲಿ ಇಸಿಐಆರ್‌ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಎಂ ಪತ್ನಿ ಪಾರ್ವತಿ ಅವರು, ತಮ್ಮ ಬಳಿಯಿರುವ ನಿವೇಶನಗಳನ್ನು ವಶಪಡಿಸಿಕೊಳ್ಳುವಂತೆ ಮುಡಾಗೆ ಪತ್ರ ಬರೆದಿದ್ದರು.

ಈ ಪತ್ರವನ್ನು 24 ಗಂಟೆಯೊಳಗೆ ಅಂಗೀಕರಿಸಿದ ಮುಡಾ ಆಯುಕ್ತ ರಘುನಂದನ್‌ ಅವರು, ಇ.ಡಿ. ಅಧಿಕಾರಿಗಳು ನಿವೇಶನವನ್ನು ತಮ್ಮ ಸ್ವಾಧೀನಕ್ಕೆ ಪಡೆಯುವ ಮೊದಲೇ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 14 ಬದಲಿ ನಿವೇಶನಗಳ ಖಾತೆಯನ್ನು ರದ್ದುಗೊಳಿಸಿದ್ದಾರೆ.

 

Tags:
error: Content is protected !!