Mysore
19
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಕನಕನಹಳ್ಳಿ ದಾಸೆಗೌಡರ ಮಗ ಕೆಡಿಯಾದಾಗ; ’ಮೈ ನೇಮ್ ಈಸ್ ಕೆಡಿ’ ಟ್ರೇಲರ್ ಬಿಡುಗಡೆ

ಒಂದು ಕಡೆ ಕಾಳಿದಾಸ, ‘ಕೆಡಿ – ದಿ ಡೆವಿಲ್‍’ ಆಗಿ ಹವಾ ಸೃಷ್ಟಿಸುವುದಕ್ಕೆ ನೋಡುತ್ತಿದ್ದರೆ, ಇನ್ನೊಂದು ಕಡೆ ಕನಕನಹಳ್ಳಿ ದಾಸೆಗೌಡರ ಮಗ ‘ಮೈ ನೇಮ್‍ ಈಸ್‍ ಕಡೆ’ ಆಗುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ಸಹ ಬಿಡುಗಡೆಯಾಗಲಿದೆ.

ಈ ಹಿಂದೆ ’ಇಂತಿ ನಿಮ್ಮ ಭೈರಾ’ ಚಿತ್ರವನ್ನು ಮಾಡಿದ್ದ ತಂಡವು, ಇದೀಗ ‘ಮೈ ನೇಮ್ ಈಸ್ ಕೆಡಿ’ ಚಿತ್ರ ಮಾಡಿದೆ. SSKB ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟೇಶ್.ಡಿ ನಿರ್ಮಾಣ ಮಾಡಿದ್ದಾರೆ. ಕೆ.ಜೆ.ಚಿಕ್ಕು ನಿರ್ದೇಶನ ಮಾಡಿದ್ದಾರೆ.

ಇದೊಂದು ಕಾಮಿಡಿ ಚಿತ್ರವಾಗಿದ್ದು, ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಕಡೆಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದ್ದು, ಡಿಸೆಂಬರ್‍ ತಿಂಗಳಲ್ಲಿ ಚಿತ್ರ ಬಿಡುಡೆಯಾಗಲಿದೆ.

ಇದನ್ನೂ ಓದಿ:-‘ಸಾಲಗಾರರ ಸಹಕಾರ ಸಂಘ’ ಎಂಬುದೊಂದಿದೆ; ನಿಮಗೆ ಗೊತ್ತಿದೆಯಾ?

ಈ ಚಿತ್ರದಲ್ಲಿ ಆರ್ಯನ್‌ ವೆಂಕಟೇಶ್ ನಾಯಕನಾಗಿ ಅಭಿನಯಿಸಿದರೆ, ’ಗಿಡುಗ’ದಲ್ಲಿ ಕಾಣಿಸಿಕೊಂಡಿದ್ದ ಭವಾನಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್‌ ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್‌ ಕಾಟಿ, ರೋಹಿಣಿ ಮುಂತಾದವರು ನಟಿಸಿದ್ದಾರೆ. ಹಿತನ್ ಹಾಸನ್ ಸಂಗೀತ ಮತ್ತು ಸಂತೋಸ ಪಂಡಿ ಛಾಯಾಗ್ರಹಣವಿದೆ.

ಆರ್ಯನ್‍ ವೆಂಕಟೇಶ್‍ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಇಂತಿ ನಿಮ್ಮ ಭೈರಾ’ ಸಿನಿಮಾ ಗಳಿಕೆ ಕಡಿಮೆ ಬಂದಿತ್ತು. ಒಟಿಟಿಗೆ ಬಿಟ್ಟಾಗ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದರ ಸ್ಪೂರ್ತಿಯಿಂದಲೇ ಈಗ ಮತ್ತೊಮ್ಮೆ ಚಿತ್ರ ಮಾಡಿದ್ದೇವೆ. ಕನಕನಹಳ್ಳಿ ದಾಸೆಗೌಡರ ಮಗ ಎಂಬುದನ್ನು ಚಿಕ್ಕದಾಗಿ ಕೆಡಿ ಎಂದು ಹೆಸರನ್ನು ಇಡಲಾಗಿದೆ. ಅಮ್ಮನನ್ನು ಉಳಿಸಿಕೊಳ್ಳುವ ಸಲುವಾಗಿ ಏಳನೇ ತರಗತಿ ಓದುತ್ತಿರುವ ಪುತ್ರನು ಶಾಸಕನ ಬಳಿ ಸಹಾಯಕ್ಕೆ ಹೋಗುತ್ತಾನೆ. ಆದರೆ, ಆತ ಅವಮಾನ ಮಾಡಿ ಕಳಿಸುತ್ತಾನೆ. ಇದರಿಂದ ಕುಪಿತಕೊಂಡು ನಾನು ಮುಂದೆ ಒಳ್ಳೆಯ ರೀತಿಯಲ್ಲಿ ಹಣ ಗಳಿಸಿ MLA ಆಗಬೇಕೆಂದು ಪಣ ತೊಡುತ್ತಾನೆ. ಅದಕ್ಕಾಗಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ, ಅಂತಿಮವಾಗಿ ತನ್ನ ಹಾದಿಯಲ್ಲಿ ಯಶಸ್ಸು ಗಳಿಸುತ್ತಾನಾ ಎಂಬುದು ಚಿತ್ರದ ಸಾರಾಂಶ’ ಎಂದರು.

Tags:
error: Content is protected !!