Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

‘ಸಾಲಗಾರರ ಸಹಕಾರ ಸಂಘ’ ಎಂಬುದೊಂದಿದೆ; ನಿಮಗೆ ಗೊತ್ತಿದೆಯಾ?

ನಮ್ಮಲ್ಲಿ ಹಲವು ಸಂಘಗಳಿವೆ. ಅದರಲ್ಲಿ ‘ಸಾಲಗಾರರ ಸಹಕಾರ ಸಂಘ’ ಎಂಬ ಸಂಘವೊಂದಿದೆ. ಅದರ ಬಗ್ಗೆ ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಸಾಲಗಾರರ ಕುರಿತು ವಿಕ್ರಮ್‍ ಧನಂಜಯ್‍ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ‘ಸಾಲಗಾರರ ಸಹಕಾರ ಸಂಘ’ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಸಾಲ ಕೊಡಿಸುವ ಕೆಂಪೇಗೌಡ, ದೊಡ್ಡ ಸಾಲಗಾರನಾಗಿ ‘ಜಾಲಿ ಜಾಲಿ’ ಜಾಕ್ ಮತ್ತು ಸಾಲ ಮಾಡಿ ವ್ಯಥೆ ಪಡುವ ‘ಕಾಮಿಡಿ ಕಿಲಾಡಿಗಳು’ ಲೋಕೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

’ಸಾಲಗಾರರ ಸಹಕಾರ ಸಂಘ’ ಚಿತ್ರಕ್ಕೆ ಇತ್ತೀಚೆಗೆ ಶರಣ್ ಹಾಡಿರುವ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಜ್ಯೋತಿಷಿ ವಿದ್ವಾನ್ ಡಾ.ಶ್ರೀಧರ್ ಗುರೂಜಿ ಮತ್ತು ನಟಿ ಬೃಂದಾ ಆಚಾರ್ಯ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

SLNLS ಎಂಟರ್ಟೈನರ್ಸ್ ಹಾಗೂ ಹವಿಶ್ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಕುಮರೇಶ್ ಎ ಮತ್ತು ಸುನೀಲ್‌ಕುಮಾರ್ (ಪಟ್ಟಣಗೆರೆ) ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ, ’ಪಂಟ್ರು’ ಮತ್ತು ’ಗೆಳೆಯ’ ಚಿತ್ರಗಳನ್ನು ನಿರ್ದೇಶಿಸಿರುವ ವಿಕ್ರಮ್ ಧನಂಜಯ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:-25 ವರ್ಷಗಳ ನಂತರ ನ.7ರಂದು ‘ಯಜಮಾನ’ ಮರು ಬಿಡುಗಡೆ

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ‘ಪ್ರಾರಂಭದಲ್ಲಿ ಟೈಟಲ್ ನೋಂದಣಿ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ಎಲ್ಲಾ ತರಹದ ಪ್ರತಿಕ್ರಿಯೆಗಳು ಬಂದವು. ಇದನ್ನೇ ಬಂಡವಾಳವಾಗಿಸಿಕೊಂಡು ಒನ್ ಲೈನ್ ಎಳೆ ಸಿದ್ದಪಡಿಸಿಕೊಂಡೆ. ನಾಲ್ಕು ನಿರುದ್ಯೋಗಿ ಯುವಕರು ಕಾರಣ ಇಲ್ಲದೆ ಸಾಲ ಮಾಡುತ್ತಾರೆ. ನಂತರ ಬಡ್ಡಿ ಕಟ್ಟಲು ಮತ್ತೆ ಸಾಲದ ಹಿಂದೆ ಹೋಗುತ್ತಾರೆ. ಕೊನೆಗೆ ಅಸಹಾಯಕ ಪರಿಸ್ಥಿತಿ ಬಂದಾಗ ನಮ್ಮಂತೆ ಸಾಲ ಮಾಡಿರುವವರನ್ನು ಒಗ್ಗೂಡಿಸಿ ಸಂಘ ಶುರು ಮಾಡಿ ಸರ್ಕಾರಕ್ಕೆ ಒಂದಷ್ಟು ಬೇಡಿಕೆ ಇಡುತ್ತಾರೆ. ಅದು ಏನು? ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ? ಎಂಬುದೇ ಚಿತ್ರದ ಕಥೆ. ಎಲ್ಲಾ ಸನ್ನಿವೇಶಗಳು ಹಾಸ್ಯದಿಂದ ಕೂಡಿದೆ. ಶರಣ್ ಅವರೊಂದಿಗೆ ಒಂದು ಹಂತದ ಮಾತುಕತೆ ನಡೆದಿದೆ. ಅವರು ಒಪ್ಪಿದರೆ, ಒಂದು ಹಾಡನ್ನು ಶೂಟ್ ಮಾಡಲಾಗುವುದು’ ಎಂದರು.

‘ಸಾಲಗಾರರ ಸಹಕಾರ ಸಂಘ’ ಚಿತ್ರದಲ್ಲಿ ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ಲಕ್ಷೀ ಸಿದ್ದಯ್ಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ದ್ ಛಾಯಾಗ್ರಹಣವಿದ್ದು, ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಮಂತಾದ ಕಡೆ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

Tags:
error: Content is protected !!