Mysore
22
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಎಸ್‌.ಉಮೇಶ್‌ ನಿಧನ

ಬೆಂಗಳೂರು: ʼತುಂಬಿದ ಮನೆʼ, ʼಅವಳೇ ನನ್ನ ಹೆಂಡ್ತಿʼ ಹೀಗೆ ಹಲವಾರು ಉತ್ತಮ ಸಿನಿಮಾ ನಿರ್ದೇಶನ ಮಾಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಉಮೇಶ್‌ (68) ಕಿಡ್ನಿ ವೈಫಲ್ಯದಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ.

ಉಮೇಶ್‌ ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

1973ರಲ್ಲಿ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದ ಉಮೇಶ್‌ ಅವರು, ಸುಮಾರು 33 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಕಾಶಿನಾಥ್‌ ನಟನೆಯ ʼಅವಳೇ ನನ್ನ ಹೆಂಡ್ತಿʼ ಚಿತ್ರದ ಕಥೆ ಬರೆದವರು ಉಮೇಶ್‌. ಈ ಚಲನಚಿತ್ರ ತಮಿಳಿಗೂ ರಿಮೇಕ್‌ ಆಗಿತ್ತು. ʼಅವನೇ ನನ್ನ ಗಂಡʼ, ʼನಂಬಿದರೆ ನಂಬಿ ಬಿಟ್ರೆ ಬಿಡಿʼ, ʼಸಿಡಿದೆದ್ದ ಗಂಡುʼ, ʼಪ್ರೇಮ ಪರೀಕ್ಷೆʼ, ʼರಾಜಾ ಕೆಂಪು ರಾಜಾʼ, ʼಎಲ್ಲರಂಥಲ್ಲ ನನ್ನ ಗಂಡʼ, ʼದಾಯಾದಿʼ, ʼಅವಳೇ ನನ್ನ ಹುಡುಗಿʼ, ʼಮದುವೆ ದಿಬ್ಬಣʼ, ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

 

Tags:
error: Content is protected !!