Mysore
28
scattered clouds

Social Media

ಬುಧವಾರ, 04 ನವೆಂಬರ್ 2026
Light
Dark

‘ಅರಮನೆಯ ವಾಸದ ಜಾಗ, ಅಂಬಾರಿ, ಸಿಂಹಾಸನ ನಮ್ಮದೇ’: ಪ್ರಮೋದಾದೇವಿ ಒಡೆಯರ್

ಮೈಸೂರು: ಅರಮನೆಯ ವಾಸದ ಭಾಗದ ಕುರಿತು ಸಚಿವ ಯತೀಂದ್ರ ನೀಡಿದ್ದ ಹೇಳಿಕೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿರುಗೇಟು ನೀಡಿದ್ದಾರೆ. ರಾಜಮನೆತನಕ್ಕೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ನೀಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಜಾಗ ರಾಜಮನೆತನದ್ದೇ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದಾದೇವಿ, ಅರಮನೆಯ ಸಂಪೂರ್ಣ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿಲ್ಲ ಎಂದು ತಿಳಿಸಿದರು. ಸಾರ್ವಜನಿಕರು ವೀಕ್ಷಿಸುವ ಮುಂಭಾಗವನ್ನು ಸರ್ಕಾರ ನಿರ್ವಹಿಸುತ್ತಿದೆ. ಅರಮನೆಯ ವಾಸದ ವಿಭಾಗ ಈಗಲೂ ರಾಜಮನೆತನದ ಸುಪರ್ದಿಯಲ್ಲಿದೆ ಎಂದು ವಿವರಿಸಿದರು.

ಅಂಬಾರಿ ಮತ್ತು ಸಿಂಹಾಸನದ ಬಗ್ಗೆಯೂ ಮಾತನಾಡಿದ ಅವರು, ಇವೆರಡೂ ರಾಜಮನೆತನದ ಖಾಸಗಿ ಸ್ವತ್ತುಗಳು ಹಾಗೂ ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿದರು. ಖಾಸಗಿ ಸ್ವತ್ತುಗಳ ಪಟ್ಟಿಯನ್ನು 1947ರಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 1951ರಲ್ಲಿ ವಿ.ಪಿ. ಮೆನನ್ ಆ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದ್ದರು ಎಂದೂ ತಿಳಿಸಿದರು.

ಅಂಬಾರಿ ಮತ್ತು ಸಿಂಹಾಸನ ಸರ್ಕಾರದ ವಶಕ್ಕೆ ಹೋಗಿಲ್ಲ. ಅವು ಈ ಹಿಂದೆಯೂ ರಾಜಮನೆತನದ ಸುಪರ್ದಿನಲ್ಲಿದ್ದವು, ಈಗಲೂ ಅರಮನೆಯಲ್ಲೇ ಇವೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.

Tags:
error: Content is protected !!