Mysore
28
light rain

Social Media

ಬುಧವಾರ, 04 ನವೆಂಬರ್ 2026
Light
Dark

ಬಸ್ ದರ ಏರಿಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ

DK Shivakumar

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ವಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಾರಿಗೆ ನಿಗಮಗಳು ಭಾರಿ ನಷ್ಟ ಅನುಭವಿಸಿದ್ದವು. ಬಸ್‌ಗಳಿಗೆ ಡೀಸೆಲ್ ಹಾಕುವುದಕ್ಕೂ ಹಣದ ಕೊರತೆ ಇತ್ತು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಬಸ್ ಪ್ರಯಾಣದ ಒಂದೊಂದು ಸ್ಟೇಜ್‌ನಲ್ಲಿ ಎರಡರಿಂದ ಮೂರು ರೂಪಾಯಿ ಹೆಚ್ಚಿಸಿರಬಹುದು ಎಂದರು. ದರ ಏರಿಕೆಯನ್ನು ಪ್ರಶ್ನಿಸುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ? ಡೀಸೆಲ್ ದರ ಹೆಚ್ಚಾದಾಗ ಯಾಕೆ ಪ್ರಶ್ನಿಸಲಿಲ್ಲ ಎಂದು ಕೇಳಿದರು.

ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳ ವೆಚ್ಚ ಹೆಚ್ಚುತ್ತಿದೆ ಎಂಬುದು ಮುಖ್ಯಮಂತ್ರಿಯವರ ವಾದ. ಮೊದಲು ಡೀಸೆಲ್ ದರ ಕಡಿಮೆ ಮಾಡಿಸಿ, ಆಗ ನಾವು ಬಸ್ ಪ್ರಯಾಣ ದರ ಕಡಿಮೆ ಮಾಡುತ್ತೇವೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಒಂದೆಡೆ ವಿಪಕ್ಷಗಳು ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. ಇನ್ನೊಂದೆಡೆ, ಸಾರಿಗೆ ನಿಗಮಗಳ ನಷ್ಟ ಮತ್ತು ಡೀಸೆಲ್ ವೆಚ್ಚವನ್ನು ಮುಂದಿಟ್ಟು ಮುಖ್ಯಮಂತ್ರಿ ದರ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

Tags:
error: Content is protected !!