Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪ್ರೇಯಸಿ ಜತೆ ಜಾಲಿ ಮೂಡ್‌ನಲ್ಲಿ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

ಮುಂಬೈ : ಭಾರತದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಮಾಜಿ ಪತ್ನಿ ನತಾಶಾ ಜೊತೆ ವಿಚ್ಚೇಧನ ಪಡೆದ ಬಳಿಕ ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಟ ನಡೆಸಿದ್ದಾರೆ ಎಂದು ಸುದ್ದಿ ಹರಿದಾಡಿ ಗಾಸಿಪ್‌ ಸಹ ಆಗಿತ್ತು.

ಆದರೆ, ಈಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಗಾಸಿಪ್‌ಗೆ ಮತ್ತಷ್ಟು ಪುಷ್ಠಿ ನೀಡಿವೆ. ಹಾರ್ದಿಕ್ ಪಾಂಡ್ಯ ಹಾಗೂ ಗೆಳತಿ ಮಹಿಕಾ ಶರ್ಮಾ ಜೊತೆ ಲಾಂಗ್ ಡ್ರೈವ್‌, ಬೀಚ್‌ನಲ್ಲಿ ಸುತ್ತಾಟ ಇತ್ಯಾದಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಹಾರ್ದಿಕ್ ಪಾಂಡ್ಯ.

ಇದನ್ನೂ ಓದಿ:-ಮೈಸೂರು | ಗಾಂಜ ಮಾರಾಟಕ್ಕೆ ಯತ್ನ ; ಇಬ್ಬರ ಬಂಧನ

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಮುಂಬೈ ಏರ್‌ಪೋರ್ಟ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಅಧಿಕೃತವಾಗಿ ಹಾರ್ದಿಕ್ ಪಾಂಡ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಇರುವ ಕೆಲವೊಂದಿಷ್ಟು ಕ್ಷಣಗಳನ್ನ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿವೆ.

ಅಂದ್ಹಾಗೆ ಹಾರ್ದಿಕ್ ಪಾಂಡ್ಯ ಪ್ರೇಯಸಿ ಮಹಿಕಾ ಶರ್ಮಾ ನಟಿ ಕಮ್ ಮಾಡೆಲ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಮಗ ಹಾಗೂ ಪ್ರೇಯಸಿ ಜೊತೆಗೆ ಕಳೆದ ಜಾಲಿ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡೆ ಕ್ರಿಕೆಟ್ ಟೂರ್ನಿ ಬಿಡುವಿನ ವೇಳೆ ಮಸ್ತ್ ಸುತ್ತಾಟ ನಡೆಸಿದ್ದಾರೆ.

Tags:
error: Content is protected !!