Mysore
23
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಓದುಗರ ಪತ್ರ | ಅನಗತ್ಯ ದೂರವಾಣಿ ಕರೆ ಕಿರಿಕಿರಿ ತಪ್ಪಿಸಿ

dgp murder case

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಏ.೨೪ರಂದು ಪ್ರಕಟವಾಗಲಿದೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು ಎಂಬ ನಾಣ್ಣುಡಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗೆ ಕೆಲವು ಖಾಸಗಿ ಪಿಯುಸಿ ಕಾಲೇಜಿನವರು ಕರೆ ಮಾಡಿ ನಮ್ಮ ಕಾಲೇಜಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಒತ್ತಾಯಿಸುತ್ತಿದ್ದಾರೆ. ನಿಮಗೆ ಫೋನ್ ನಂಬರ್ ಕೊಟ್ಟಿದ್ದು ಯಾರು ಎಂದು ಕೇಳಿದರೆ ಆಯಾ ಶಾಲೆಗಳಿಂದ ಪಡೆದಿದ್ದೇವೆ ಎನ್ನುತ್ತಾರೆ. ಈ ಬಗ್ಗೆ ಶಾಲೆಗಳಲ್ಲಿ ವಿಚಾರಿಸಿದರೆ ನಾವು ಯಾವ ಕಾಲೇಜಿಗೂ ಪೋಷಕರ ಫೋನ್ ನಂಬರ್ ಕೊಡುವುದಿಲ್ಲ ಎನ್ನುತ್ತಾರೆ. ಖಾಸಗಿ ಕಾಲೇಜುಗಳ ದೂರವಾಣಿ ಕರೆಯಿಂದ ಪೋಷಕರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯವರು ಕೂಡಲೇ ಕ್ರಮ ಕೈಗೊಂಡು ಖಾಸಗಿ ಕಾಲೇಜುಗಳಿಗೆ ಪೋಷಕರ ದೂರವಾಣಿ ಸಂಖ್ಯೆಗಳನ್ನು ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
– ನಿಂಗರಾಜ್, ಮೈಸೂರು

Tags:
error: Content is protected !!