Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಹೆಣ್ಣಿನ ಬಗ್ಗೆ ಅವಹೇಳವಾಗಿ ಮಾತನಾಡುವವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕವಿದೆ : ಬಾನು ಮುಷ್ತಾಕ್‌

Those Who Speak Disrespectfully About Women Need Mental Treatment: Banu Mushtaq

ಮೈಸೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಬಗ್ಗೆ ಸಾರ್ವಜನಿಕವಾಗಿ ಅವಹೇಳನವಾಗಿ ಮಾತನಾಡಿರುವ ಬಗ್ಗೆ ಕಿಡಿಕಾರಿದ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌, ಅಶ್ಲೀಲ ಪದ ಬಳಸಿ ಮಾತನಾಡುವವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ ಎಂದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನ ಮೂದಲಿಸುವುದು ಗಂಡು ವ್ಯಕ್ತಿ ಮಾತ್ರ ಎನ್ನುವುದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಇದರ ವಿರುದ್ಧ ಹೋರಾಟ ಅಗತ್ಯವಿದೆ ಎಂದರು.

ಬಿಜೆಪಿ ಎಂಎಲ್‌ಸಿ ಬಿ.ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಕುರಿತು ಅವಹೇಳನಕಾರಿ ಮಾತಾಡಿದ್ದಾರೆ. ಈ ಹಿಂದೆಯೂ ಬಿಜೆಪಿಯ ಸಿ.ಟಿ.ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದರು. ಇದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಣ್ಣೀರು ಹಾಕಿದ್ದರು. ಪ್ರಜಾಸತಾತ್ಮಕ ಅಧಿಕಾರ ಸಿಕ್ಕಿರುವಾಗ ನೀವು ಅದನ್ನು ಅಪಮಾನವಾಗಿ ತೆಗೆದುಕೊಳ್ಳದೆ ದಿಟ್ಟತನದಿಂದ ಸ್ವೀಕರಿಸಬೇಕು ಎಂದಿದ್ದೆ. ನೀವು ಸಾಮಾನ್ಯ ಮಹಿಳೆಯಲ್ಲ, ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ನಿಂದನೆ ಮಾಡಿದರೆ ಕಾಯ್ದೆಯನ್ನು ತನ್ನಿ ಎಂದಿದ್ದೆ. ಈ ಪ್ರಕರಣದಲ್ಲೂ ಅಶ್ಲೀಲ ಪದ ಬಳಸಿ ಮಾತನಾಡುವವರಿಗೆ ಮಾನಸಿಕ ಚಿಕೆತ್ಸೆ ಆಗಬೇಕು ಎಂದರು.

ಕನ್ನಡದಲ್ಲಿ ನಾನೂ ಸೇರಿದಂತೆ ಅನ್ಯಭಾಷೆಗಳಲ್ಲಿ ಪ್ರಶಸ್ತಿ ಪಡೆಯುವ ಗಟ್ಟಿ ಸಾಹಿತಿಗಳಿದ್ದಾರೆ. ಹೀಗಾಗಿ ನಿಮ್ಮ ಹಸಿನಾ ಇಂಗ್ಲೀಷ್‌ಗೆ ಭಾಷಾಂತರವಾದ ನಂತರ ನಿಮಗೆ ಪ್ರಶಸ್ತಿ ಲಭಿಸಿತು. ಈ ನಿಟ್ಟಿನಲ್ಲಿ ಸರ್ಕಾರಗಳು ಅನುವಾದಕ್ಕಿಂತಲೂ ಹೆಚ್ಚಿನದಾಗಿ ಏನೆಲ್ಲಾ ಮಾಡಬೇಕೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಲನಶೀಲ ಸಮಾಜ ಬೇಕು ಎನ್ನುತ್ತೇವೆ. ಇಷ್ಟೊಂದು ತೀವ್ರ ರೀತಿಯ ಚಲನಶೀಲ ಸಮಾಜಕ್ಕೆ, ಇಡೀ ಪ್ರಪಂಚಕ್ಕೆ, ನಾವು ಅದರ ಜತೆಯಲ್ಲಿ ಸೂಕ್ತವಾದ ಸಂವಾದ ಮಾಡುವುದಕ್ಕೆ ಅನುವಾದ ಕಾರ್ಯಕಗಳನ್ನು ಹೆಚ್ಚಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಕಟ್ಟುಪಾಡು ಮುಸ್ಲಿಂ ಸಮುದಾಯದ ಕಥೆಯಲ್ಲ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪಿತೃ ಪ್ರಾಧಾನ್ಯತೆಯ ನಿರಾಕರಣೆ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲೇ ಇದೆ. ಹೀಗಾಗಿ ನನ್ನ ಕಥೆಗಳು ಎಲ್ಲರನ್ನೂ ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಸಂವಿಧಾನವೆಂಬುದು ಮಳೆ,ಬಿಸಿಲಿನಿಂದ ಆಶ್ರಯ ನೀಡುವ ಒಂದು ಛತ್ರಿ ಇದ್ದಂತೆ, ಅದನ್ನು ಸರಿಯಾಗಿ ಬಳಸಿ ರಕ್ಷಣೆ ಪಡೆಯಬೇಕು. ಸಾಮಾಜಿಕ ದುಷ್ಟ ಆಚರಣೆಗಳು ಚಾಲ್ತಿಯಲ್ಲಿದ್ದು, ಅದನ್ನು ಹೋಗಲಾಡಿಸಬೆಕು, ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಕೃಪಾ ಪೋಷಿತ ಅನುವಾದಗಳಿಂತ ಹೆಚ್ಚಾಗಿ ಸಾಕಷ್ಟು ಭಾಷಾ ಕೌಶಲ ಇರುವಂತಹ ಎಲ್ಲ ರೀತಿಯ ಸಾಹಿತಿಗಳು ತಮ್ಮದೇ ಆದಂತಹ ಪ್ರಯತ್ನಗಳನ್ನು ಮಾಡಬೇಕು. ಭಾಷಾಂತರ ಕ್ರಿಯೆಗೆ ಕೇವಲ ಕನ್ನಡವನ್ನೇ ಕಾಯ್ದುಕೊಂಡು ಕುಳಿತುಕೊಳ್ಳಬೇಕಾಗಿಲ್ಲ. ಕೇರಳದಲ್ಲಿ ಭಾಷಾಂತರ ಕೇವಲ ಸರ್ಕಾರದ ಕ್ರಿಯೇ ಎಂದು ಹೇಳಿಲ್ಲ . ಅಲ್ಲಿ ಪ್ರತಿಯೊಬ್ಬರೂ ಭಾಷಾಂತರ ಮಾಡುತ್ತಾರೆ. ಅವರ ಕೃತಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.
ಅಕ್ಷರ ಮತ್ತು ಬಹುತ್ವದ ನೆಲೆಯನ್ನು ಜನರಲ್ಲಿ ಬಿತ್ತಿದರೆ ಸಮಾಜದಲ್ಲಿ ಶಾಂತಿನೆಲೆಸಿರುತ್ತದೆ, ಇಲ್ಲದಿದ್ದರೆ ರಕ್ತದ ಕಲೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಅಭಿರುಚಿ ಪ್ರಕಾಶನದಿಂದ ಪ್ರಕಟವಾದ ೬ ತಿಂಗಳಲ್ಲೇ ಮಲೆಯಾಳಂನಲ್ಲಿ ಪ್ರಕಟವಾಗುತ್ತದೆ. ಇದರಿಂದ ಸಾಕಷ್ಟು ಜನರಿಗೆ ತಲುಪುತ್ತದೆ. ಕನ್ನಡದವರಿಗೆ ಎಷ್ಟು ಪರಿಚಿತಳಾಗಿದ್ದೇನೋ ಮಲೆಯಾಳಂನವರಿಗೂ ಅಷ್ಟೇ ಪರಿಚಿತಳಾಗಿದ್ದೇನೆ. ಹೀಗಾಗಿ ಮುಂದಿನ ವಾರ ಕೇರಳ ಸರ್ಕಾರ ನನ್ನನ್ನು ಆಹ್ವಾನ ಮಾಡಿದೆ. ಅಲ್ಲಿನ ಸರ್ಕಾರವೇ ಗೌರವಿಸುತ್ತಿದೆ. ಕೇರಳದಂತಹ ಅಭಿರುಚಿ ನಮ್ಮಲ್ಲೂ ಬರಬೇಕು ಎಂದು ಹೇಳಿದರು.

ಮುಸ್ಲಿಂ ಮಹಿಳೆಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರೂ ಸಹ ಆಧುನಿಕ ಭರಾಟೆಯ ನಡುವೆಯೂ ಕಟ್ಟುಪಾಡಿನಿಂದ ಹೊರಬರಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕೇವಲ ಮುಸ್ಲಿಂ ಮಹಿಳೆಯ ಕಥೆಯಲ್ಲ. ಇದು ಸಮಾಜ ಮತ್ತು ಸಮುದಾಯದಲ್ಲಿ ಇರುವಂತಹ ಪುರುಷ ಪ್ರಾತಿನಿಧ್ಯತೆಯನ್ನು ಒಬ್ಬ ಮಹಿಳೆಯಾಗಿ ಆಕೆ ಹೇಗೆ ಎದುರಿಸುತ್ತಾಳೆ ಹಾಗೂ ಪಿತೃ ಪ್ರಾತಿನಿಧ್ಯತೆಯನ್ನು ಹೇಗೆ ವ್ಯೆಂಗದ, ಪ್ರತಿಭಟನೆಯ ಮೂಲಕ ನಿರಾಕರಿಸುತ್ತಾಳೆ. ನಿರಾಕರಣೆ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಲ್ಲ ಎಂದರು.

ಇದು ಒಂದು ಸಮುದಾಯದ ಅಭಿವ್ಯಕ್ತಿಯ ವೃತ್ತದಲ್ಲಿ ಬರುತ್ತದೆ. ಇದು ಇಡೀ ಪ್ರಪಂಚಕ್ಕೆ ಅನ್ವಯವಾಗುವಂತಹ ಒಂದು ಕಥೆ ಎಂದು ಬೂಕರ್ ಕಮ್ಯೂನಿಟಿಯ ತೀರ್ಪುಗಾರರೇ ಹೇಳಿದ್ದಾರೆ ಎಂದು ತಿಳಿಸಿದರು.
ಈ ಬಾರಿ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಹ್ವಾನ ಸಾಧ್ಯತೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ವತಃ ಬಾನು ಮುಷ್ತಾಕ್ ಕೂಸು ಹುಟ್ಟೋ ಮೊದಲೇ ಕುಲಾವಿ ಯಾಕೆ ಈ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ ಸರ್ಕಾರ ಏನು ನಿರ್ಧಾರ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಹಾಜರಿದ್ದರು.

Tags:
error: Content is protected !!