Mysore
24
overcast clouds

Social Media

ಶನಿವಾರ, 13 ಜೂನ್ 2026
Light
Dark

ಓದುಗರ ಪತ್ರ: ನಂಜನಗೂಡು ಕೆ.ಹೆಚ್.ಬಿ. ಕಾಲೋನಿ ರಸ್ತೆ ದುರಸ್ತಿ ಮಾಡಿ

ಓದುಗರ ಪತ್ರ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು ನಂಜನಗೂಡಿನಲ್ಲಿ. ಆದರೆ ಹೌಸಿಂಗ್ ಬೋರ್ಡ್ ಕಾಲೋನಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ. ವಾರ್ಡ್ ನಂಬರ್ ೨೧, ೨೨ ಹಾಗೂ ೨೩ ಹಾಗೂ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಎದುರುಗಡೆಯ ಮುಖ್ಯ ರಸ್ತೆ ತೀರಾ ಹಾಳಾಗಿದ್ದು, ಬೈಕ್‌ನಲ್ಲಿ ಹೋಗುವಾಗ ಕೆಲವರು ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ರಸ್ತೆ ದುರಸ್ತಿ ಮಾಡುವಂತೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ, ಶಾಸಕ ದರ್ಶನ ಧ್ರುವ ನಾರಾಯಣ ವಾಸ್ತವತೆಯನ್ನು ಅರಿತು ಈ ಮುಖ್ಯ ರಸ್ತೆ ಸರಿಪಡಿಸಲು ಅಗತ್ಯವಾಗಿ ಮುಂದಾಗಬೇಕಿದೆ.

– ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!