Mysore
26
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದನ್ನು  ಭಾರತೀಯ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (CAG) ವರದಿ ಬಹಿರಂಗಪಡಿಸಿದೆ.

ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಕೇಂದ್ರ ಸರ್ಕಾರದ ಲೆಕ್ಕಪತ್ರ ವರದಿಯನ್ನು ವಿಶ್ಲೇಷಿಸಿರುವ ಸಿಎಜಿ, ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಅನುದಾನವನ್ನು ತಡೆಹಿಡಿಯುತ್ತಿರುವ ಶೈಲಿಯನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ.

ಸ್ವರೂಪದ ಪ್ರಕೃತಿ ವಿಕೋಪಗಳ ಪರಿಹಾರಕ್ಕಾಗಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಒಟ್ಟು ರೂ.11,474 ಕೋಟಿ ಮಂಜೂರಾಗಿತ್ತು. ಆದರೆ, ರಾಜ್ಯಗಳಿಗೆ ತಲುಪಿದ್ದು ಕೇವಲ ರೂ.5,356 ಕೋಟಿ ಮಾತ್ರ. ಅಂದರೆ, ಶೇ. 53 ಕ್ಕಿಂತಲೂ ಹೆಚ್ಚು ಅನುದಾನ (ರೂ6,117.97 ಕೋಟಿ) ಬಳಕೆಯಾಗದೆ ಕೇಂದ್ರದ ಬೊಕ್ಕಸದಲ್ಲೇ ಉಳಿದುಕೊಂಡಿದೆ.

ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ ಮಂಜೂರಾಗಿದ್ದ ರೂ.2,868 ಕೋಟಿಗಳ ಪೈಕಿ ರಾಜ್ಯಗಳಿಗೆ ವರ್ಗಾವಣೆಯಾಗಿದ್ದು ಕೇವಲ ರೂ.719.72 ಕೋಟಿ ಮಾತ್ರ. ಶೇ. 75 ರಷ್ಟು ಅನುದಾನ ಬಳಕೆಯಾಗದೆ ಬಾಕಿ ಉಳಿದಿದೆ.

ರಾಜ್ಯಗಳಿಗೆ ನೀಡಲಾಗುವ ‘ವಿಶೇಷ ನೆರವು’ ಯೋಜನೆಗೆ ರೂ20,000 ಕೋಟಿ ನಿಗದಿಪಡಿಸಲಾಗಿದ್ದರೂ, ವೆಚ್ಚ ಮಾಡಿದ್ದು ಕೇವಲ ರೂ.3,350 ಕೋಟಿ. ಉಳಿದ ಶೇ. 83 ರಷ್ಟು ಹಣ ಬಿಡುಗಡೆಯೇ ಆಗಿಲ್ಲ.ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ‘ಮುಂಗಡ ನೆರವಿನ ಸಾಲ’ವಾಗಿ ನೀಡಲು ಕಾಯ್ದಿರಿಸಲಾಗಿದ್ದ ರೂ.100 ಕೋಟಿ ಅನುದಾನದಿಂದ ಒಂದು ಪೈಸೆಯನ್ನೂ ಬಳಸಲಾಗಿಲ್ಲ.

2024ರಲ್ಲಿ ಭೀಕರ ಬರಗಾಲ ಎದುರಿಸಿದ್ದ ಕರ್ನಾಟಕ ಸರ್ಕಾರವು ರೂ.18,000 ಕೋಟಿ ಪರಿಹಾರ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ರೂ.3,499 ಕೋಟಿ ಮಾತ್ರ. ಈ ತಾರತಮ್ಯವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು.

Tags:
error: Content is protected !!