Mysore
27
overcast clouds

Social Media

ಭಾನುವಾರ, 15 ನವೆಂಬರ್ 2026
Light
Dark

ಓದುಗರ ಪತ್ರ: ನೆಹರೂ ಸೇವೆ ಸ್ಮರಿಸೋಣ

ರಾಜಕೀಯ ಮುತ್ಸದ್ದಿ, ದೇಶದ ಪ್ರಥಮ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ಶನಿವಾರ ಆಚರಿಸಲಾಯಿತು.

ಮಕ್ಕಳ ಬಗ್ಗೆ ಅಮಿತವಾದ ಪ್ರೀತಿ ವಾತ್ಸಲ್ಯ ಹೊಂದಿದ್ದ ನೆಹರೂರವರು, ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿಸಲು ಇಷ್ಟ ಪಟ್ಟಿದ್ದರು. ಹೀಗಾಗಿ ನೆಹರೂ ಜನ್ಮ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯನ್ನು ಏಕ ಕಾಲದಲ್ಲಿ ಆಚರಿಸಲಾಯಿತು. ಈ ದೇಶವನ್ನು ಪ್ರಧಾನ ಮಂತ್ರಿಯಾಗಿ ದೀರ್ಘಕಾಲ ಆಳಿದ ನೆಹರೂ ಭಾರತದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು.

ದೇಶಕ್ಕೆ ಸುಭದ್ರ ಆಡಳಿತ ನೀಡಿದ ನೆಹರೂರವರ ರಾಷ್ಟ್ರ ಪ್ರೇಮ ಮತ್ತು ಮುತ್ಸದ್ದಿತನ ಮಹತ್ವದ್ದಾಗಿದೆ.

– ಕೆ.ವಿ.ವಾಸು, ಮೈಸೂರು

Tags:
error: Content is protected !!