ಮೈಸೂರು : ಪಿರಿಯಾಪಟ್ಟಣದ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೋಡಿ ದುರಸ್ತಿ ಸಾಗುವಳಿ ದುರಸ್ತಿ ಸಾಗುವಳಿ ಹೆಸರಿನಲ್ಲಿ ಜಮೀನು ರಸ್ತೆಗೆ ಹೋಗುತ್ತೆ ಎಂದು ಹೆದರಿಸಿ ರೈತನಿಂದ ೧ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿ ಇಂದು ಮುಂಗಡವಾಗಿ ೩೦ ಸಾವಿರ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ವಿಜಯಕುಮಾರ್ ಹುಣಸೂರು ಬಾರ್‌ವೊಂದರಲ್ಲಿ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ರವೀಂದ್ರ ಅವರನ್ನು ಹಿಡಿಯಲಾಗಿದೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.





