Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಮ.ಬೆಟ್ಟದಲ್ಲಿ ಸಚಿವ ಸಂಪುಟ : ಎಚ್.ವಿಶ್ವನಾಥ್‌ ಹೇಳಿದ್ದೇನೆ?

ಮೈಸೂರು : ಸಿಎಂ ಸಿದ್ದರಾಮಯ್ಯ ನಿನ್ನೆ(ಏ.24) ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಈ ಹಿಂದೆಯೂ ಯಡಿಯೂರಪ್ಪ, ಸಿದ್ದರಾಮಯ್ಯ ಇಬ್ಬರೂ ಕೂಡ ಬೇರೆ ಬೇರೆ ಕಡೆ ಸಚಿವ ಸಂಪುಟ ಸಭೆ ಮಾಡಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂದು ಎಂಎಲ್‌ಸಿ ಎಚ್ ವಿಶ್ವನಾಥ್‌ ಕಿಡಿಕಾರಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ಮಾಡಿರುವುದರಿಂದ ದುಂದು ವೆಚ್ಚವಾಗಿದೆ. ಇದರ ಫಲಿತಾಂಶವೂ ಶೂನ್ಯವಾಗಲಿದೆ ಎಂದು ಹೇಳಿದ್ದಾರೆ.

ಕೆಆರ್‌ಸಿ ಪ್ರವಾಸೋದ್ಯಮ ಇಲಾಖೆ ನೀಡಿ
ಕಾವೇರಿ ಆರತಿ ಮಾಡುವುದಕ್ಕೆ 93 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಕೆ ಆರ್ ಎಸ್ ಈ ಹಿಂದೆ ಇದ್ದ ರೀತಿ ಇದೆಯಾ? ಎಂದು ಪ್ರಶ್ನಿಸಿದ ಅವರು, ಯೋಜನೆಗಳಿಗೆ ಹಣ ನೀಡಿದರೆ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ತಾರೆ. ಕೆ.ಆರ್.ಎಸ್ ಅನ್ನು ನೀರಾವರಿ ಇಲಾಖೆಗೆ ಬದಲು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ನೀಡಬೇಕು ಆಗ್ರಹಿಸಿದರು.

ಇಡೀ ಇಸ್ಲಾಮಿಕ್ ರಾಷ್ಟ್ರಗಳು ಜಾಗತೀಕವಾಗಿ ಧರ್ಮಾಧಾರಿತವಾಗಿ ನಡೆದುಕೊಳ್ಳುತ್ತಿವೆ. ನೆರೆಯ ಪಾಕಿಸ್ತಾನ ಕೂಡ ಧರ್ಮಾಧಾರಿತ ದೇಶವಾಗಿದೆ. ಅಲ್ಲಿ ಧರ್ಮದ ಆಧಾರದ ಮೇಲೆ ಆಡಳಿತ ನಡೆಯುತ್ತಿದೆ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಮೋದಿ‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಬೇಕು.

ಉಗ್ರರ ದಾಳಿ ಕುರಿತು ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ಅಪ್ರಸ್ತುತ. ಪ್ರಿಯಾಂಕಾ ಗಾಂಧಿ ಪತಿ ಎಂಬ ಕಾರಣಕ್ಕೆ ವಾದ್ರಾ ಏನೇನೋ ಮಾತನಾಡಬಾರದು ಎಂದು ಹೇಳಿದರು.

Tags:
error: Content is protected !!